ಮನೆಯ ಮಾಲೀಕನಿಲ್ಲದಿದ್ದಾಗ ಕೆಲಸಗಾರ ಮಾಡಿದ್ದಾನೆ ಇಂತಹ ನೀಚ ಕೃತ್ಯ
ಬುಧವಾರ, 16 ಅಕ್ಟೋಬರ್ 2019 (12:45 IST)
ಇಂಗ್ಲೆಂಡ್ : ಮನೆಯಲ್ಲಿ ಯಾರು ಇಲ್ಲದಿದ್ದಾಗ ಮನೆಯ ಶೌಚಾಲಯ ಸ್ವಚ್ಚಗೊಳಿಸುವ ಕೆಲಸಗಾರ ತನ್ನ ಪ್ರೇಯಸಿಯ ಜೊತೆ ಸೋಫಾದ ಮೇಲೆ ಲೈಂಗಿಕ ಕ್ರಿಯೆ ನಡೆಸಿದ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ.
ಮನೆಯ ಮಾಲೀಕ ತಮ್ಮ ಕುಟುಂಬದವರೊಂದಿಗೆ ಟರ್ಕಿಗೆ ಹೋಗಿದ್ದ ವೇಳೆ ಕೆಲಸದಾಳು ಮೈಕ್ ವಿಲ್ಸನ್ ಎಂಬಾತ ತನ್ನ ವಿವಾಹಿತ ಪ್ರೇಯಸ್ಸಿಯನ್ನು ಮನೆಗೆ ಕರೆದು ಮನೆಯ ಸೋಫಾದ ಮೇಲೆ ಕಾಮದಾಟ ಶುರು ಮಾಡಿದ್ದಾರೆ
ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಇದನ್ನು ಕಂಡ ಮಾಲೀಕ ಮೈಕ್ ವಿಲ್ಸನ್ ನನ್ನು ಕೆಲಸದಿಂದ ತೆಗೆದುಹಾಕಿದ್ದಲ್ಲದೇ ಮಹಿಳೆ ತನ್ನ ಕೆಲಸದಾತನೊಂದಿಗೆ ಸಂಬಂಧ ಬೆಳೆಸಿದ ವಿಡಿಯೋವನ್ನು ಆಕೆಯ ಗಂಡನಿಗೆ ತೋರಿಸಿದ್ದಾನೆ. ಈ ಹಿನ್ನಲೆಯಲ್ಲಿ ತನ್ನ ದಾಂಪತ್ಯ ಜೀವನ ಮಾಲೀಕನಿಂದ ಹಾಳಾಯ್ತು ಎಂದು ವಿವಾಹಿತ ಮಹಿಳೆ ಆರೋಪಿಸಿದ್ದಾಳೆ ಎನ್ನಲಾಗಿದೆ.