ಹೌದು. ಬಹಿರ್ದೆಸೆ ಮುಕ್ತಗೊಳಿಸುವ ಉದ್ದೇಶದಿಂದ ಮದುವೆಯಾಗುವ ಪ್ರತಿಯೊಬ್ಬ ಹುಡುಗನ ಮನೆಯಲ್ಲಿ ಶೌಚಾಲಯ ಇರಬೇಕು ಎಂಬ ಕಾರಣಕ್ಕೆ ಮಧ್ಯಪ್ರದೇಶ ಸರ್ಕಾರ ಇಂತಹ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ.
ಕನ್ಯಾ ವಿವಾಹ ಯೋಜನೆಯಡಿ ಅರ್ಜಿ ಸಲ್ಲಿಸುವ ಮದುಮಗಳು ವರನ ಮನೆಯಲ್ಲಿ ಟಾಯ್ಲೆಟ್ಯಿದೆ ಎಂದು ಸಾಬೀತು ಪಡಿಸಬೇಕು. ಅದಕ್ಕಾಗಿ ಮದುಮಗ ಟಾಯ್ಲೆಟ್ನಲ್ಲಿ ನಿಂತು ಕ್ಲಿಕ್ಕಿಸಿದ ಫೋಟೋವನ್ನು ಸರ್ಕಾರಕ್ಕೆ ಸಲ್ಲಿಸಬೇಕು. ನಂತರ ಯುವತಿಗೆ ಈ ಯೋಜನೆಯಡಿ 51 ಸಾವಿರ ರೂಪಾಯಿ ಸರ್ಕಾರ ನೀಡುತ್ತದೆ ಎನ್ನಲಾಗಿದೆ.