1890 ರಲ್ಲಿ ತೊಂದರೆಗೊಳಗಾಗಿದ್ದ ವ್ಯಾನ್ ಗಾಗ್ ತಾನು ತಂಗಿದ್ದ ಹೊಟೇಲ್ ನವರಿಂದ ಈ ರಿವಾಲ್ವರ್ ಕೇಳಿ ಪಡೆದು ಅದರಿಂದ ತನ್ನನ್ನು ತಾನೇ ಸುಟ್ಟುಕೊಂಡಿದ್ದಾನಂತೆ. ನಂತರ ಈ ರಿವಾಲ್ವರ್ 1965ರಲ್ಲಿ ರೈತನೊಬ್ಬನಿಗೆ ಸಿಕ್ಕಿದ್ದು, ಇದನ್ನು ಆಮ್ಸ್ಟರ್ ಡ್ಯಾಮ್ ನ ವ್ಯಾನ್ ಗಾಗ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿತಂತೆ.
ಆದರೆ ಈಗ “ಕಲೆಯ ಇತಿಹಾಸದಲ್ಲೇ ಅತ್ಯಂತ ಪ್ರಸಿದ್ಧ ಆಯುಧ” ಎಂದು ಹರಾಜಿಟ್ಟ ಈ ರಿವಾಲ್ವರ್ 67,000 ಡಾಲರ್ ಗೆ ಮಾರಾಟವಾಗಬಹುದೆಂದು ಅಂದಾಜಿಸಲಾಗಿದೆ.