ಬೀಜಿಂಗ್ : ಭಾರತದಲ್ಲಿ ಟಿಕ್ ಟಾಕ್ ನಿಷೇಧಿಸಿದ್ದಕ್ಕೆ ಟಿಕ್ ಟಾಕ್ ಕಂಪೆನಿಯ ಮಾತೃಸಂಸ್ಥೆಗೆ 6 ಶತಕೋಟಿ ಡಾಲರ್ ನಷ್ಟ ಉಂಟಾಗಿದೆ ಎಂಬುದಾಗಿ ತಿಳಿದುಬಂದಿದೆ.
ಈ ಬಗ್ಗೆ ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಟ್ವೀಟ್ ಮಾಡಿದ್ದು, ಭಾರತ ಚೀನಾ ನಡುವಿನ ಘರ್ಷಣೆಯಿಂದಾಗಿ ಚೀನಾದ ಟಿಕ್ ಟಾಕ್ ಸೇರಿದಂತೆ 59 ಅಪ್ಲಿಕೇಶನ್ ಗಳನ್ನು ಭಾರತ ಸರ್ಕಾರ ಬ್ಯಾನ್ ಮಾಡಿದೆ. ಭಾರತ ಸರ್ಕಾರದ ಈ ನಿರ್ಧಾರದಿಂದ ಟಿಕ್ ಟಾಕ್ ಕಂಪೆನಿಯ ಮಾತೃಸಂಸ್ಥೆ ಬೈಟ್ ಡ್ಯಾನ್ಸ್ ಗೆ 6 ಶತಕೋಟಿ ಡಾಲರ್(45 ಸಾವಿರ ಕೋಟಿ ರೂ)ನಷ್ಟವಾಗಿದೆ ಎಂದು ತಿಳಿಸಿದೆ.