ಟಿಕ್‌ಟಾಕ್ ನಿಷೇಧ: ಕಾರಣ ಬಿಚ್ಚಿಟ್ಟ ಪಾಕಿಸ್ತಾನ

ಸೋಮವಾರ, 22 ನವೆಂಬರ್ 2021 (20:18 IST)
ಪಾಕಿಸ್ತಾನದ ಮಾಧ್ಯಮ ನಿಯಂತ್ರಣ ಪ್ರಾಧಿಕಾರವು ಬರೋಬ್ಬರಿ 4 ತಿಂಗಳ ಬಳಿಕ ಟಿಕ್ಟಾಕ್ ಮೇಲಿನ ನಿಷೇಧವನ್ನು ತೆಗೆದುಹಾಕಿದೆ.
ಕಳೆದ 15 ತಿಂಗಳಲ್ಲಿ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರವು ನಾಲ್ಕನೇ ಬಾರಿಗೆ ಈ ನಿಷೇಧ ವಿಧಿಸಿದ್ದು, ಈಗ ತೆಗೆದು ಹಾಕಿದೆ. ಟಿಕ್ಟಾಕ್ ಆ್ಯಪ್ನಲ್ಲಿನ ಅನೈತಿಕ, ಅಶ್ಲೀಲ ಮತ್ತು ಅಸಭ್ಯ ವಿಷಯಗಳ ಕುರಿತು ವ್ಯಾಪಕವಾದ ದೂರುಗಳು ಬಂದ ಮೇಲೆ ಪಾಕಿಸ್ತಾನ ಸರ್ಕಾರವು ಅಕ್ಟೋಬರ್ 2020 ರಲ್ಲಿ ನಿರ್ಬಂಧಿಸಿತ್ತು. ಕಾನೂನುಬಾಹಿರ ವಿಷಯವನ್ನು ಅಪ್ಲೋಡ್ ಮಾಡುವ ಬಳಕೆದಾರರನ್ನು ನಿರ್ಬಂಧಿಸುವುದಾಗಿ ಟಿಕ್ಟಾಕ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ಟಿಕ್ಟಾಕ್ ಮೇಲಿನ ನಿಷೇದವನ್ನು ರದ್ದುಪಡಿಸಿದೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ