ಕೊಡಗಿನಲ್ಲಿ ಯಾಕೆ ಹೀಗಾಗುತ್ತಿದೆ ಎಂದು ಅರ್ಥವಾಗುತ್ತಿಲ್ಲ .ತಮಗೆ ಅನ್ಯಾಯವಾಗಿದೆ ಎಂದು ಶನಿವಾರ ಸಂತೆಯ ಪೋಲಿಸ್ ಠಾಣೆಯ ಮುಂಭಾಗದಲ್ಲಿ ಕೆಲವು ಮಹಿಳೆಯರು ಮೊನ್ನೆಯ ದಿನ ಪ್ರತಿಭಟನೆ ನಡೆಸಿ ನ್ಯಾಯ ಬೇಕು ,ಅಂಬೇಡ್ಕರ್ ಜಿಂದಾಬಾದ್ ಎಂದು ಘೋಷಣೆ ಕೂಗಿದರು. ಅವರ ಕಡೆಯವರು ತಪ್ಪು ಮಾಡಿದ್ದಾರೋ ಅಥವಾ ನ್ಯಾಯವಾಗಿದ್ದಾರೋ ಎಂಬುದು ಪೋಲಿಸ್ ತನಿಖೆಯಲ್ಲಿ ಗೊತ್ತಾಗುತ್ತದೆ .ಏಕೆಂದರೆ ಕಾನೂನು ಇರುವುದೇ ನ್ಯಾಯ ಒದಗಿಸಲು.
ನಾನು ಮೊನ್ನೆ ದಿನ ಈ ವಿಡಿಯೋ ಗಮನಿಸಿದ್ದೀನಿ .ಹೌದು ಪ್ರತಿಯೊಬ್ಬರಿಗೂ ನ್ಯಾಯ ಬೇಕಾದಾಗ ನೆನಪಾಗುವುದು ಬಾಬಾ ಸಾಹೇಬ್ ಡಾ ಬಿ ಆರ್ ಅಂಬೇಡ್ಕರ್. ಪ್ತತಿಯೊಬ್ಬ ಭಾರತೀಯರಿಗೆ ಸಮಾನತೆಯ ಹಕ್ಕನ್ನು ನೀಡುವ ಮಹಾನ್ ಸಂವಿಧಾನವನ್ನು ಅವರು ನಮಗೆ ನೀಡಿದ್ದಾರೆ .ಹಾಗಾಗಿ ಅಂಬೇಡ್ಕರ್ ರವರಿಗೆ ಜೈ,ಅಂಬೇಡ್ಕರ್ ಜಿಂದಾಬಾದ್ ಅಂತ ಘೋಷಣೆ ಕೂಗುವುದು ಸಹಜ .ಅದೇ ಘಟನೆ ಮೊನ್ನೆ ದಿನ ನಡೆದಿದೆ .
ಮಾನ್ಯ ಪೋಲಿಸ್ ವರಿಷ್ಠಾಧಿಕಾರಿಗಳೇ ಪಾಕಿಸ್ತಾನ ಜಿಂದಾಬಾದ್ ಎಂದು ಆ ಮಹಿಳೆಯರು ಹೇಳಿದ್ದರೆ ಅವರ ಮೇಲೆ ದೇಶ ದ್ರೋಹದ ಕೇಸ್ ಹಾಕಿ ಬಂಧಿಸಿ. ಅವರು ಆ ರೀತಿ ಘೋಷಣೆ ಕೂಗಲಿಲ್ಲ ಎಂದರೆ ಸುಳ್ಳು ಸುದ್ದಿ ಹರಡಿದ ಈ ವಿಕೃತ ಮನಸ್ಸಿನ ವ್ಯಕ್ತಿಯನ್ನು ಒದ್ದು ಜೈಲಿಗೆ ಹಾಕಿ .ಇವರು ಕೊಡಗಿನ ಜನರ ಗೌರವ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿದ್ದಾರೆ .ಇಂತಹ ಸಾಮಾಜಿಕ ಕೆಟ್ಟ ಕ್ರಿಮಿಗಳನ್ನು ಹೊಸಕಿ ಹಾಕದಿದ್ದರೆ ಕೊಡಗಿನ ಸ್ವಾಸ್ಥ್ಯ ವನ್ನು ಇವರು ಕೆಡಿಸುತ್ತಿರುತ್ತಾರೆ .