ಇಸ್ಲಾಮಾಬಾದ್ : ಜೂನ್ 14ರಂದು ಗ್ರೀಸ್ನ ಕರಾವಳಿ ಪ್ರದೇಶದಲ್ಲಿ ನಡೆದ ಬೋಟ್ ದುರಂತದಲ್ಲಿ 300 ಮಂದಿ ಪಾಕ್ ಪ್ರಜೆಗಳು ದುರಂತ ಸಾವಿಗೀಡಾಗಿದ್ದು, ಕೇವಲ 12 ಮಂದಿ ಮಾತ್ರವೇ ಘಟನೆಯಲ್ಲಿ ಬದುಕುಳಿದಿದ್ದಾರೆ ಎಂದು ಪಾಕಿಸ್ತಾನ ಸಚಿವಾಲಯ ಹೇಳಿದೆ.
ಹೌದು. ಪ್ರತಿ ವರ್ಷ ಪಾಕಿಸ್ತಾನದ ಸಾವಿರಾರು ಸಂಖ್ಯೆಯ ಯುವ ಸಮೂಹ ಉತ್ತಮ ಜೀವನ ಕಂಡುಕೊಳ್ಳುವ ಸಲುವಾಗಿ ಯೂರೋಪ್ಗೆ ವಲಸೆ ಹೋಗುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಾಗೆಯೇ ಕಳೆದ ವಾರ ವಲಸೆ ಹೋಗುತ್ತಿದ್ದ ವೇಳೆ ಗ್ರೀಸ್ ಕರಾವಳಿ ಪ್ರದೇಶದಲ್ಲಿ ನೂರಾರು ಜನರಿದ್ದ ಬೋಟ್ ಮುಳುಗಿ 300 ಮಂದಿ ಪಾಕ್ ಪ್ರಜೆಗಳು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ 12 ಮಂದಿ ಪಾಕ್ ಪ್ರಜೆಗಳು ಮಾತ್ರ ಬದುಕುಳಿದಿರುವುದಾಗಿ ಪಾಕ್ ಸಚಿವಾಲಯ ಹೇಳಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಕಳ್ಳಸಾಗಣೆ ಮಾಡುತ್ತಿದ್ದ 10 ಮಂದಿಯನ್ನ ಬಂಧಿಸಲಾಗಿದೆ. ಪಾಕ್ ಆಡಳಿತ ಕಾಶ್ಮೀರದ 9 ಜನರನ್ನು ಬಂಧಿಸಲಾಗಿದೆ. ಮತ್ತೊಬ್ಬನನ್ನ ಗುಜರಾತ್ನಲ್ಲಿ ಬಂಧಿಸಲಾಗಿದೆ.