ಅವಳಿ ಸಹೋದರರ ಸಂಬಳ ಕೇಳಿದ್ರೆ ಶಾಕ್ ಆಗ್ತೀರಾ!

ಶುಕ್ರವಾರ, 2 ಜುಲೈ 2021 (09:54 IST)
ಆಂಧ್ರಪ್ರದೇಶ: ಸಪ್ತರ್ಷಿ ಹಾಗೂ ರಾಜರ್ಷಿ ಆಂಧ್ರಪ್ರದೇಶದ ಎಸ್ಆರ್ಎಂ ಯೂನಿವರ್ಸಿಟಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಮೊದಲ ಬ್ಯಾಚ್ ಆಗಿದೆ. ಸಾಮಾನ್ಯವಾಗಿ ಮೊದಲ ಬ್ಯಾಚ್ಗೆ ವಾರ್ಷಿಕ ಪ್ಯಾಕೇಜ್ 7 ಲಕ್ಷ ಇರುತ್ತದೆ. ಆದರೆ ಈ ಅವಳಿ ಸಹೋದರರು ಅತ್ಯಧಿಕ ಪ್ಯಾಕೇಜ್ ಪಡೆದಿದ್ದಾರೆ.



















ಅವಳಿ ಸಹೋದರರಿಬ್ಬರು ಒಂದೇ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದು, ಉತ್ತಮ ಸಂಬಳದ ಪ್ಯಾಕೇಜನ್ನೂ ಸಹ ಪಡೆದಿದ್ದಾರೆ. ಪಶ್ಚಿಮ ಬಂಗಾಳದ ಬುರ್ದ್ವಾನ್ನ ಸಪ್ತರ್ಷಿ ಮತ್ತು ರಾಜರ್ಷಿ ಮಜುಂದಾರ್ ಅವಳಿ ಸಹೋದರರು. ಜಪಾನ್ನ ಪಿವಿಪಿ ಇಂಕ್ ಕಂಪನಿಯಲ್ಲಿ ಕೆಲಸ ಪಡೆದಿದ್ದಾರೆ. ಇದು ಗೂಗಲ್ ಜಪಾನ್ನ ಕಾರ್ಯತಂತ್ರದ ಪಾಲುದಾರ ಆಗಿದೆ. ಇಬ್ಬರೂ ವಾರ್ಷಿಕ 50 ಲಕ್ಷ ಸಂಬಳದ ಪ್ಯಾಕೇಜ್ ಪಡೆದಿದ್ದಾರೆ. ಇಬ್ಬರೂ ಆಂಧ್ರಪ್ರದೇಶದ ಎಸ್ಆರ್ಎಂ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿದ್ದಾರೆ. ಕ್ಯಾಂಪಸ್ ಪ್ಲೇಸ್ಮೆಂಟ್ನಲ್ಲಿ ಈ ಇಬ್ಬರೂ ಅವಳಿಗಳು ಆಯ್ಕೆಯಾಗಿದ್ದಾರೆ. ಆ ಮೂಲಕ ಆಂಧ್ರಪ್ರದೇಶದಿಂದ ಪದವಿ ಪಡೆದ ವಿದ್ಯಾರ್ಥಿಗಳ ಪೈಕಿ ಇವರಿಬ್ಬರೇ ಅತೀ ಹೆಚ್ಚು ಸಂಬಳದ ಪ್ಯಾಕೇಜ್ ಪಡೆದಿರುವವರು.

ಸಪ್ತರ್ಷಿ ಮತ್ತು ರಾಜರ್ಷಿ ಆಂಧ್ರ ಪ್ರದೇಶದ ಎಸ್ಆರ್ಎಂ ವಿಶ್ವವಿದ್ಯಾಲಯದ ಬಿ.ಟೆಕ್ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳು. ಇವರು ತಮ್ಮ ಬಾಲ್ಯದ ದಿನಗಳನ್ನು ಬಹುತೇಕ ಜಾರ್ಖಂಡ್ನಲ್ಲೇ ಕಳೆದಿದ್ದಾರೆ.
ನಮ್ಮ ತಂದೆಗೆ ಜಾರ್ಖಂಡ್ನಲ್ಲೇ ಉದ್ಯೋಗ ಇದ್ದ ಕಾರಣ, ನಾವು ಹೆಚ್ಚಾಗಿ ನಮ್ಮ ಬಾಲ್ಯವನ್ನು ಜಾರ್ಖಂಡ್ನಲ್ಲೇ ಕಳೆದೆವು. ನಾವು ನಮ್ಮ ಪ್ರಾಥಮಿಕ ಶಿಕ್ಷಣವನ್ನು ಅರ್ಧ ಬೊಕರೊ ಸ್ಟೀಲ್ ಸಿಟಿಯಲ್ಲಿ, ಇನ್ನರ್ಧ ಡೆಹಘರ್ನಲ್ಲಿ ಪಡೆದವು. ಬಳಿಕ ಪ್ರೌಢ ಶಿಕ್ಷಣವನ್ನು ಬೊಕರೋ ಸ್ಟೀಲ್ ಸಿಟಿಯಲ್ಲಿ ಪಡೆದೆವು. ನಂತರ ಆಂಧ್ರ ಪ್ರದೇಶಕ್ಕೆ ಬಂದು ಎಸ್ಆರ್ಎಂ ಯೂನಿವರ್ಸಿಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಕೋರ್ಸ್ಗೆ ಸೇರಿಕೊಂಡೆವು. ನಮ್ಮ ತಂದೆ ಹೋಟೆಲ್ನಲ್ಲಿ ಜನರಲ್ ಮ್ಯಾನೇಜರ್ ಆಗಿದ್ದರೆ, ನಮ್ಮ ತಾಯಿ ಗೃಹಿಣಿಯಾಗಿದ್ದಾರೆ’ ಎಂದು 22 ವರ್ಷದ ರಾಜರ್ಷಿ ಹೇಳುತ್ತಾನೆ.
ಸಪ್ತರ್ಷಿ ಹಾಗೂ ರಾಜರ್ಷಿ ಆಂಧ್ರಪ್ರದೇಶದ ಎಸ್ಆರ್ಎಂ ಯೂನಿವರ್ಸಿಟಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಮೊದಲ ಬ್ಯಾಚ್ ಆಗಿದೆ. ಸಾಮಾನ್ಯವಾಗಿ ಮೊದಲ ಬ್ಯಾಚ್ಗೆ ವಾರ್ಷಿಕ ಪ್ಯಾಕೇಜ್ 7 ಲಕ್ಷ ಇರುತ್ತದೆ. ಆದರೆ ಈ ಅವಳಿ ಸಹೋದರರು ಅತ್ಯಧಿಕ ಪ್ಯಾಕೇಜ್ ಪಡೆದಿದ್ದಾರೆ. ಇವರ ಸಾಧನೆಯನ್ನು ಎಸ್ಆರ್ಎಂ ಯೂನಿವರ್ಸಿಟಿ ಗೌರವಿಸಿದೆ. ಉಪಕುಲಪತಿ ಪ್ರೊ.ವಿ.ಎಸ್.ರಾವ್ ಅವರು ಅವಳಿ ಸಹೋದರರಾದ ಸಪ್ತರ್ಷಿ ಹಾಗೂ ರಾಜರ್ಷಿಗೆ ತಲಾ 2 ಲಕ್ಷ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.
ಸಾಧನೆಗೈದ ಇಬ್ಬರೂ ಅವಳಿಗಳು ಯಶಸ್ಸಿಗೆ ಕಾರಣರಾದ ತಮ್ಮ ತಂದೆ-ತಾಯಿಗೆ ಹಾಗೂ ಯೂನಿವರ್ಸಿಟಿ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ. ‘ಈ ರೀತಿಯ ದೊಡ್ಡ ಪ್ಲೇಸ್ಮೆಂಟ್ನಲ್ಲಿ ನಾವು ಸೆಲೆಕ್ಟ್ ಆಗುತ್ತೇವೆ ಎಂದು ಊಹಿಸಿಯೇ ಇರಲಿಲ್ಲ. ನಾವಿಬ್ಬರೂ ಒಟ್ಟಿಗೆ ಓದಿ, ಒಟ್ಟಿಗೆ ಬೆಳೆದು ಈಗ ಒಟ್ಟಿಗೆ ಒಂದೇ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದೇವೆ. ನಮ್ಮಿಬ್ಬರ ಆಲೋಚನೆಗಳು ಒಂದೇ ರೀತಿಯಾಗಿವೆ‘ ಎಂದು ಸಪ್ತರ್ಷಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ