ಕೀವ್ : ಉತ್ತರ ಕೊರಿಯಾದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುತ್ತಿರುವುದಾಗಿ ಉಕ್ರೇನ್ ಹೇಳಿದೆ.
ದೇಶದ ಪೂರ್ವದಲ್ಲಿ ರಷ್ಯಾದ ಪರ ಪ್ರತ್ಯೇಕತಾವಾದಿಗಳು ತಮ್ಮ ಸ್ವಘೋಷಿತ ಗಣರಾಜ್ಯಗಳನ್ನು ಗುರುತಿಸಿದೆ ಎಂದು ಹೇಳಿದ ಸ್ಪಲ್ವ ಸಮಯದ ನಂತರ ಉಕ್ರೇನ್ ಈ ನಿರ್ಧಾರಕ್ಕೆ ಬಂದಿದೆ.
ಡೊನೆಟ್ಸ್ಕ್ ಪೀಪಲ್ಸ್ ರಿಪಬ್ಲಿಕ್ ಮತ್ತು ಲುಗಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್ ಘೋಷಣೆಗೆ ಉತ್ತರ ಕೊರಿಯಾದ ಮಾನ್ಯತೆ ಕೊಟ್ಟಿತು. ಅಲ್ಲದೇ ಕಳೆದ ತಿಂಗಳು ರಷ್ಯಾದ ಮತ್ತೊಂದು ಮಿತ್ರರಾಷ್ಟ್ರ ಸಿರಿಯಾ ಸಹ ಅದೇ ಕ್ರಮವನ್ನು ತೆಗೆದುಕೊಂಡಿತ್ತು. ಆದರೆ ಉಕ್ರೇನಿಯನ್ ವಿದೇಶಾಂಗ ಸಚಿವಾಲಯವು ಉತ್ತರ ಕೊರಿಯಾದ ಈ ನಿರ್ಧಾರವನ್ನು ಖಂಡಿಸಿದೆ.
ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸುವುದಾಗಿ ಉಕ್ರೇನ್ ಘೋಷಿಸಿದೆ ಎಂದು ಹೇಳಿಕೆ ತಿಳಿಸಿದೆ.