ಮಾಸ್ಕೋ : ಉಕ್ರೇನ್‌ಗೆ ಲಾಂಗ್ ರೇಂಜ್ ಕ್ಷಿಪಣಿಗಳನ್ನು ಅಮೆರಿಕ ಪೂರೈಸಿತು ಎಂದಾದರೆ, ನಾವು ಕೂಡಾ ಒಂದು ಸೂಕ್ತ ನಿರ್ಧಾರ ಮಾಡಿ, ಹೊಸದೊಂದು ಗುರಿಯನ್ನೇ ಹೊಡೆಯುತ್ತೇವೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ.
ಉಕ್ರೇನ್‌ಗೆ ಅಮೆರಿಕ ಸುಧಾರಿತ ಶಸ್ತ್ರಾಸ್ತ್ರಗಳನ್ನು ವಿತರಿಸುವ ನಿರ್ಧಾರವನ್ನು ಖಂಡಿಸಿದ ಪುಟಿನ್, ಯುದ್ಧವನ್ನು ಇನ್ನೂ ಹೆಚ್ಚಿನ ಕಡೆಗೆ ವಿಸ್ತರಿಸುವುದಾಗಿ ತಿಳಿಸಿದ್ದಾರೆ. ನಾವು ಸೂಕ್ತ ತೀರ್ಮಾನಗಳನ್ನು ತೆಗೆದುಕೊಂಡು, ನಮ್ಮ ಶಕ್ತಿಶಾಲಿ ಶಸ್ತ್ರಾಸ್ತ್ರಗಳನ್ನು ಬಳಸುತ್ತೇವೆ ಹಾಗೂ ಇಲ್ಲಿಯವರೆಗೂ ಹೊಡೆದಿರದ ಗುರಿಗಳನ್ನು ಹೊಡೆಯುತ್ತೇವೆ ಎಂದಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಅಮೆರಿಕ ಯುದ್ಧಪೀಡಿತ ಉಕ್ರೇನ್‌ಗೆ ಸುಧಾರಿತ ಲಾಂಗ್ ರೇಂಜ್ ರಾಕೆಟ್ ಸಿಸ್ಟಮ್ ಸೇರಿದಂತೆ ಇತರ ಶಸ್ತ್ರಾಸ್ತ್ರಗಳನ್ನು ಒದಗಿಸಿ ಸಹಾಯ ಮಾಡುವುದಾಗಿ ತಿಳಿಸಿತ್ತು. ಇದರ ಬೆನ್ನಲ್ಲೇ ಪುಟಿನ್ ಇದೀಗ ಪಾಶ್ಚಿಮಾತ್ಯ ದೇಶಗಳು ಉಕ್ರೇನ್‌ಗೆ ಸಹಾಯ ಮಾಡುವುದನ್ನು ವಿರೋಧಿಸಿ, ಬೆದರಿಕೆ ಒಡ್ಡಿದ್ದಾರೆ.