ಅಮೆರಿಕ ಸಂಬಂಧ ಕಡಿದುಕೊಳ್ಳುವುದಾಗಿ ಎಚ್ಚರಿಕೆ!

ಮಂಗಳವಾರ, 22 ಮಾರ್ಚ್ 2022 (13:43 IST)
ನ್ಯೂಯಾರ್ಕ್ : ಅಮೆರಿಕದ ಜೊತೆಗಿನ ರಷ್ಯಾದ ಸಂಬಂಧಗಳು ಉಲ್ಲಂಘಟನೆಯ ಸಮೀಪದಲ್ಲಿವೆ ಎಂದು ರಷ್ಯಾ ಅಮೆರಿಕಕ್ಕೆ ಎಚ್ಚರಿಗೆ ನೀಡಿದೆ.
 
ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಅಮೆರಿಕ ಟೀಕಿಸಿದ್ದಕ್ಕಾಗಿ ಅಮೆರಿಕ ರಾಯಭಾರಿಯನ್ನು ಕರೆಸಿ ತನ್ನ ಪ್ರತಿಭಟನೆಯನ್ನು ಸಲ್ಲಿಸಿದೆ. ಈ ಕುರಿತಾಗಿ ಹೇಳಿಕೆ ಬಿಡುಗಡೆ ಮಾಡಿರುವ ರಷ್ಯಾ ವಿದೇಶಾಂಗ ಸಚಿವಾಲಯ ಅಮೆರಿಕ ಅಧ್ಯಕ್ಷ ಪುಟಿನ್ನನ್ನು ಟೀಕಿಸಿದ್ದನ್ನು ಉಲ್ಲೇಖಿಸಿದೆ.

ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ನಡೆಸಿದ ನಂತರ ನಾಗರಿಕರ ಮೇಲೆ ನಡೆದಿರುವ ಹಲ್ಲೆಗಳನ್ನು ಗಮನಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಪುಟಿನ್ನ್ನು ಯುದ್ಧಾಪರಾಧಿ ಎಂದು ಕರೆದಿದ್ದರು.

ಇದಕ್ಕೆ ತೀವ್ರ ಪ್ರತಿಟನೆ ವ್ಯಕ್ತಪಡಿಸಿರುವ ರಷ್ಯಾ ಮಾಸ್ಕೋದಲ್ಲಿ ಅಮೆರಿಕ ರಾಯಾಭಾರಿ ಜಾನ್ ಸುಲ್ಲಿವಾನ್ ಅವರೊಂದಿಗೆ ನಡೆಸಿದ ಸಭೆಯಲ್ಲಿ, ರಾಜ್ಯದ ಉನ್ನತ ವ್ಯಕ್ತಿಯಿಂದ ಬಂದಿರುವ ಇಂತಹ ಹೇಳಿಕೆಗಳು ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಅಂಚಿನಲ್ಲಿಟ್ಟಿದೆ ಎಂದು ರಷ್ಯಾ ಒತ್ತಿ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ