ಉಕ್ರೇನ್ ಯುದ್ಧವನ್ನು 2ನೇ ಮಹಾಯುದ್ಧಕ್ಕೆ ಹೋಲಿಸಿದ ಝೆಲೆನ್ಸ್ಕಿ!

ಬುಧವಾರ, 23 ಮಾರ್ಚ್ 2022 (08:06 IST)
ಕೀವ್ : ಮಾಸ್ಕೋದಲ್ಲಿ ಉಕ್ರೇನ್ ಪ್ರಶ್ನೆಗೆ ಅಂತಿಮ ಪರಿಹಾರದ ಯೋಜನೆಗಳು ನಡೆಯುತ್ತಿವೆ.

ಇದು 2ನೇ ಮಹಾಯುದ್ಧದ ಸಮಯದಲ್ಲಿ ಯಹೂದಿಗಳ ನರಮೇಧದ ನಾಜಿ ಯೋಜನೆಯನ್ನು ಉಲ್ಲೇಖಿಸುತ್ತದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದರು.

ರಷ್ಯಾದ ಆಕ್ರಮಣದ ಕುರಿತು ಇಸ್ರೇಲ್ನ ಸಂಸತ್ತಿನಲ್ಲಿ ಮಾತನಾಡಿದ ಅವರು, ಉಕ್ರೇನ್ನಲ್ಲಿ ಜನರು, ರಾಜ್ಯ, ಸಂಸ್ಕೃತಿ ಸಂಪೂರ್ಣ ವಿನಾಶವಾಗಿದೆ. ಇದರಿಂದಾಗಿ 2ನೇ ಮಹಾಯುದ್ಧಕ್ಕೆ ಉಕ್ರೇನ್ನ ದಾಳಿಯನ್ನು ಹೋಲಿಸುವ ಸಂಪೂರ್ಣ ಹಕ್ಕು ನನಗಿದೆ ಎಂದರು.

ಉಕ್ರೇನ್ನ ಜನರ ಪ್ರಸ್ತುತ ಪರಿಸ್ಥಿತಿಯನ್ನು 2ನೇ ಮಹಾಯುದ್ಧದಲ್ಲಿ ಯಹೂದಿಗಳ ನರಮೇಧ ಆದಂತೆ ಆಗಿದೆ ಎಂದ ಅವರು, ನಮ್ಮ ಹಾಗೂ ನಿಮ್ಮ ಬೆದರಿಕೆ ಒಂದೇ ಆಗಿದೆ.

ಇದರಿಂದಾಗಿ ನೀವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಾ ಎನ್ನುವ ಸಮಯ ಬಂದಿದೆ ಎಂದು ಮನವಿ ಮಾಡಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ