ಅಮೆರಿಕಾದಲ್ಲಿರುವ ಭಾರತೀಯ ಮೂಲದ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿಕೊಳ್ಳಲು ಫೆಬ್ರವರಿ 19 ರ ಡೆಡ್ ಲೈನ್

Krishnaveni K

ಶುಕ್ರವಾರ, 24 ಜನವರಿ 2025 (10:59 IST)
ನ್ಯೂಯಾರ್ಕ್: ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೇರುತ್ತಿದ್ದಂತೇ ವಲಸೆ ನೀತಿ ಪರಿಷ್ಕರಣೆ ಬಗ್ಗೆ ಖಡಕ್ ಆದೇಶ ನೀಡಿದ್ದಾರೆ. ಇದರ ಬೆನ್ನಲ್ಲೇ ಭಾರತೀಯ ಮೂಲದ ಅಮೆರಿಕಾ ವಾಸಿ ಗರ್ಭಿಣಿಯರು ಹೆರಿಗೆ ಮಾಡಿಸಿಕೊಳ್ಳಲು ಆಸ್ಪತ್ರೆಗಳ ಮುಂದೆ ಕ್ಯೂ ನಿಂತಿದ್ದಾರೆ.

ಅಮೆರಿಕಾ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್ ಮೊದಲ ದಿನವೇ ಭಾರತ ಸೇರಿದಂತೆ ವಿದೇಶೀ ಪ್ರಜೆಗಳ ಮಕ್ಕಳಿಗೆ ಹುಟ್ಟಿನಿಂದ ಸಿಗುವ ಅಮೆರಿಕಾ ಪೌರತ್ವ ರದ್ದುಗೊಳಿಸುವ ಕಾಯ್ದೆ ರದ್ದುಗೊಳಿಸುವ ಘೋಷಣೆ ಮಾಡಿದ್ದರು. ಜೊತೆಗೆ ಫೆಬ್ರವರಿ 20 ರೊಳಗೆ ಜನಿಸಿದ ಮಕ್ಕಳಿಗೆ ವಿನಾಯ್ತಿ ನೀಡುವುದಾಗಿ ಹೇಳಿದ್ದರು.

ಹೀಗಾಗಿ ಈಗ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಗರ್ಭಿಣಿಯರು ಹೆರಿಗೆ ಮಾಡಿಸಿಕೊಳ್ಳವುದಕ್ಕೆ ಆಸ್ಪತ್ರೆಗಳ ಮುಂದೆ ಕ್ಯೂ ನಿಂತಿದ್ದಾರೆ. ಅವಧಿಪೂರ್ಣವಾದ ಹೆರಿಗೆಯಾದರೂ ಸರಿ ಫೆಬ್ರವರಿ 19 ರೊಳಗೆ ಸಿಸೇರಿಯನ್ ಮಾಡಿಸಿ ಎಂದು ವೈದ್ಯರಿಗೆ ದಂಬಾಲು ಬಿದ್ದಿದ್ದಾರೆ.

ಫೆಬ್ರವರಿ 20 ರ ನಂತರ ಪೌರತ್ವ ಕಾಯಿದೆಯಲ್ಲಿ ಬದಲಾವಣೆಯಾಗಲಿದೆ. ಅಲ್ಲಿಯವರೆಗೆ ಅಮೆರಿಕಾದಲ್ಲಿ ಜನಿಸಿದ ಮಕ್ಕಳಿಗೆ ಸಹಜವಾಗಿ ಅಮೆರಿಕಾ ಪೌರತ್ವ ಸಿಗುತ್ತದೆ. ಅದರ ನಂತರ ಜನಿಸಿದ ಮಕ್ಕಳಿಗೆ ಅಮೆರಿಕಾದ ಸಹಜ ಪೌರತ್ವ ಸಿಗುವುದಿಲ್ಲ. ಹೀಗಾಗಿ ಅಲ್ಲಿ ನೆಲೆಸಿರುವ ಭಾರತೀಯ ಗರ್ಭಿಣಿಯರು ಈಗ ಫೆಬ್ರವರಿ 19 ರೊಳಗೇ ಹೆರಿಗೆ ಮಾಡಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ