ಅಮೆರಿಕಾ ವೀಸಾ ಪಡೆಯಲು ಇನ್ನು ಕಷ್ಟಪಡಬೇಕಾಗಿಲ್ಲ: ಕನ್ನಡಿಗರಿಗೆ ಗುಡ್ ನ್ಯೂಸ್

Krishnaveni K

ಶನಿವಾರ, 21 ಡಿಸೆಂಬರ್ 2024 (09:23 IST)
ಬೆಂಗಳೂರು: ಅಮೆರಿಕಾಗೆ ತೆರಳಲು ಬಯಸುವ ಕನ್ನಡಿಗರಿಗೆ ಇಷ್ಟು ದಿನ ವೀಸಾ ಪಡೆಯುವುದೇ ದೊಡ್ಡ ತಲೆನೋವಾಗಿತ್ತು. ವೀಸಾ ಪಡೆಯಲು ಚೆನ್ನೈ ಅಥವಾ ಹೈದರಾಬಾದ್ ಗೆ ಹೋಗಬೇಕಾಗಿತ್ತು. ಆದರೆ ಈಗ ಆ ತಲೆನೋವು ನಿವಾರಣೆಯಾಗಿದೆ.

ಜನವರಿಯಿಂದ ಅಮೆರಿಕಾದ ಕಾನ್ಸುಲೇಟ್ ಕಚೇರಿ ಬೆಂಗಳೂರಿನಲ್ಲಿ ತೆರೆಯಲಿದೆ. ಹೀಗಾಗಿ ಇನ್ನು ಮುಂದೆ ಅಮೆರಿಕಾ ವೀಸಾಕ್ಕಾಗಿ ಕನ್ನಡಿಗರು ನೆರೆ ರಾಜ್ಯಕ್ಕೆ ಹೋಗುವ ಬದಲು ಬೆಂಗಳೂರಿನಲ್ಲೇ ಪಡೆಯಬಹುದಾಗಿದೆ.

ಬೆಂಗಳೂರು ಐಟಿ-ಬಿಟಿ ಸಿಟಿಯಾಗಿದ್ದು ಸಾಕಷ್ಟು ವಿದೇಶೀಯರು ಇಲ್ಲಿಗೆ ಬಂದು-ಹೋಗಿ ಮಾಡುತ್ತಿರುತ್ತಾರೆ. ಆದರೆ ಇದುವರೆಗೆ ಅಮೆರಿಕಾಗೆ ತೆರಳಲು ಇಲ್ಲಿಂದ ವೀಸಾ ಪಡೆಯುವ ಸೌಲಭ್ಯವಿರಲಿಲ್ಲ. ಆದರೆ ಈಗ ಅಮೆರಿಕಾದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಇಲ್ಲಿಯೇ ಕಾನ್ಸುಲೇಟ್ ಕಚೇರಿ ತೆರೆಯುವ ಮಾಹಿತಿ ನೀಡಿದ್ದಾರೆ.

ಇದರಿಂದಾಗಿ ಇನ್ನು ಮುಂದೆ ಅಮೆರಿಕಾಗೆ ತೆರಳುವ ಎಷ್ಟೋ ಕುಟುಂಬಗಳು, ಐಟಿ-ಬಿಟಿ ಉದ್ಯೋಗಿಗಳಿಗೆ ವೀಸಾ ಪಡೆಯುವುದು ಸುಲಭವಾಗಲಿದೆ. ಇಂತಹದ್ದೊಂದು ಸುದ್ದಿ ಸಿಗುತ್ತಿದ್ದಂತೇ ಸಾರ್ವಜನಿಕರಿಂದಲೂ ಪ್ರಶಂಸೆ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ