ಅಮೆರಿಕಾದಲ್ಲಿ ಶುರುವಾಗಿದೆ ಗಡೀಪಾರು ಪ್ರಕ್ರಿಯೆ, ಮೂರೇ ದಿನದಲ್ಲಿ ಗಡೀಪಾರಾದವರೆಷ್ಟು ನೋಡಿ

Krishnaveni K

ಶನಿವಾರ, 25 ಜನವರಿ 2025 (11:16 IST)
ನ್ಯೂಯಾರ್ಕ್: ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಮೂರೇ ದಿನದಲ್ಲಿ ಗಡೀಪಾರಾದವರು ಎಷ್ಟು ಮಂದಿ ನೋಡಿ.

ಅಮೆರಿಕಾ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರಕ್ಕೇರಿದ ಬೆನ್ನಲ್ಲೇ ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚಾರಣೆ ಶುರುವಾಗಿದೆ. ಕಳೆದ ಮೂರು ದಿನಗಳಲ್ಲಿ 538 ಅಕ್ರಮ ವಲಸಿಗರನ್ನು ಬಂಧಿಸಲಾಗಿದೆ. 100 ಕ್ಕೂ ಹೆಚ್ಚು ಜನರನ್ನು ಸೇನಾ ವಿಮಾನಗಳ ಮೂಲಕ ಗಡೀಪಾರು ಮಾಡಲಾಗಿದೆ.

ಇದು ಅಮೆರಿಕಾ ಇತಿಹಾಸದಲ್ಲೇ ಅತೀ ದೊಡ್ಡ ಗಡೀಪಾರು ಪ್ರಕ್ರಿಯೆ ಎನ್ನಲಾಗುತ್ತಿದೆ. ಅಮೆರಿಕಾದಲ್ಲಿ ಸೂಕ್ತ ದಾಖಲೆಗಳಿಲ್ಲದೇ ಸುಮಾರು 1.1 ಕೋಟಿ ಅಕ್ರಮ ವಲಸಿಗರು ನೆಲೆಸಿದ್ದಾರೆ ಎನ್ನಲಾಗಿದೆ. ಇದೀಗ ಅಪರಾಧ ಹಿನ್ನಲೆಯುಳ್ಳವರನ್ನು ಗಡೀಪಾರು ಮಾಡಲಾಗಿದೆ.

ಅಮೆರಿಕಾ ಗಡೀಪಾರು ನಿಯಮ 1996 ರ ಪ್ರಕಾರ ಅಕ್ರಮ ವಲಸಿಗರನ್ನು ಮೊದಲು ಅಮೆರಿಕಾ ಪೊಲೀಸ್ ಪಡೆಗಳು ಬಂಧಿಸುತ್ತವೆ. ಬಳಿಕ ಅವರನ್ನು ನಿಗಾ ಕೇಂದ್ರಗಳಿಗೆ ವರ್ಗಾಯಿಸಲಾಗುತ್ತದೆ. ಬಳಿಕ ಅಲ್ಲಿಂದ ಗಡೀಪಾರು ಮಾಡಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ