Donald Trump: ಸ್ನೇಹಿತ ಎನ್ನುತ್ತಲೇ ಭಾರತೀಯ ಷೇರುಮಾರುಕಟ್ಟೆಗೆ ಕೊಳ್ಳಿ ಇಟ್ಟ ಡೊನಾಲ್ಡ್ ಟ್ರಂಪ್

Krishnaveni K

ಬುಧವಾರ, 22 ಜನವರಿ 2025 (09:52 IST)

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರಕ್ಕೇರುತ್ತಿದ್ದಂತೇ ಡೊನಾಲ್ಡ್ ಟ್ರಂಪ್ ಮಾಡಿದ ಭಾಷಣ ಷೇರುಮಾರುಕಟ್ಟೆಯನ್ನು ತಲ್ಲಣಗೊಳಿಸಿದೆ. ಇದರ ಬಿಸಿ ಭಾರತೀಯ ಹೂಡಿಕೆದಾರರಿಗೂ ತಟ್ಟಿದೆ.

ಅಮೆರಿಕಾದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಮೊನ್ನೆ ಅಧಿಕಾರ ಸ್ವೀಕರಿಸಿದ್ದರು. ಡೊನಾಲ್ಡ್ ಟ್ರಂಪ್ ಭಾರತವನ್ನು, ಭಾರತೀಯ ಪ್ರಧಾನಿ ಮೋದಿಯನ್ನು ತಮ್ಮ ಆಪ್ತ ಮಿತ್ರ ಎನ್ನುತ್ತಲೇ ನಮ್ಮ ಷೇರು ಮಾರುಕಟ್ಟೆಗೆ ಕೊಳ್ಳಿಯಿಟ್ಟಿದ್ದಾರೆ ಎನ್ನುತ್ತಿದ್ದಾರೆ ಹೂಡಿಕೆದಾರರು.

ಟ್ರಂಪ್ ಪಕ್ಕಾ ಬ್ಯುಸಿನೆಸ್ ಮೆನ್. ಅವರು ಅಧಿಕಾರಕ್ಕೆ ಬಂದರೆ ಇಷ್ಟು ದಿನ ಕಳೆಗುಂದಿದ್ದ ಷೇರು ಮಾರುಕಟ್ಟೆ ಚೇತರಿಕೆಯಾಗಬಹುದು ಎಂದು ಎಲ್ಲರೂ ಲೆಕ್ಕಾಚಾರ ಹಾಕಿದ್ದರು.


ಇದರ ಜೊತೆಗೆ ಫೆಬ್ರವರಿ 1 ರಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಕೂಡಾ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಭಾರತೀಯ ಷೇರುಮಾರುಕಟ್ಟೆಯಲ್ಲಿ ತೀರಾ ಇಳಿಕೆ ಕಂಡುಬಂದಿದೆ. ಇತ್ತೀಚೆಗೆ ಅಮೆರಿಕಾದಲ್ಲಿ ಸಂಭವಿಸಿದ್ದ ಅಗ್ನಿ ಅನಾಹುತವೂ ಭಾರತದ ಮಾರುಕಟ್ಟೆ ಮೇಲೆ ಪರಿಣಾಮ ಬೀರಿತ್ತು. ಇದೀಗ ಟ್ರಂಪ್ ಮುಂದಿನ ದಿನಗಳಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದರ ಮೇಲೆ ಭಾರತೀಯ ಷೇರುಮಾರುಕಟ್ಟೆಯ ಭವಿಷ್ಯ ನಿಂತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ