ಹಿಂಸಾಚಾರ : ರಾಜ್ಯಾದ್ಯಂತ ಇಂಟರ್ನೆಟ್ ಸ್ಥಗಿತ!

ಶುಕ್ರವಾರ, 16 ಜೂನ್ 2023 (08:44 IST)
ಇಂಫಾಲ್ : ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದ್ದು, ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಗೆ ಮಹಿಳೆ ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ.
 
ಖಮೆನ್ಲೋಕ್ ಪ್ರದೇಶದಲ್ಲಿ ತಡರಾತ್ರಿ ಈ ದಾಳಿ ನಡೆದಿದೆ. ಮೃತ ದೇಹಗಳು ಗುರುತು ಸಿಗದಂತೆ ಗಾಯಗಳಾಗಿದ್ದು, ಅನೇಕ ಸುತ್ತಿನ ಗುಂಡುಗಳು ದೇಹವನ್ನು ಛಿದ್ರಗೊಳಿಸಿವೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಇಂಫಾಲ್ನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ. 

ಮೇಟಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಘರ್ಷಣೆಗಳಿಂದಾಗಿ ಕಳೆದ ಒಂದು ತಿಂಗಳಿನಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದೆ. ಶಾಂತಿಯನ್ನು ಪುನರ್ ಸ್ಥಾಪಿಸುವ ಪ್ರಯತ್ನಗಳ ಮಧ್ಯೆ ಈ ಘಟನೆಯು ದೊಡ್ಡ ಹಿನ್ನಡೆಯಾಗಿದೆ. ರಾತ್ರಿಯ ಘಟನೆಯ ನಂತರ ಕಫ್ರ್ಯೂ ಸಡಿಲಿಕೆಯನ್ನು ನಿಬರ್ಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ರಾಜ್ಯದ 16 ಜಿಲ್ಲೆಗಳಲ್ಲಿ 11 ಜಿಲ್ಲೆಗಳು ಕಫ್ರ್ಯೂ ವಿಧಿಸಲಾಗಿದೆ. ಹಿಂಸಾಚಾರವನ್ನು ಉತ್ತೇಜಿಸುವ ವದಂತಿಗಳನ್ನು ತಡೆಯಲು ರಾಜ್ಯಾದ್ಯಂತ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ