ಯುದ್ಧ : ಮುರಿದು ಬಿತ್ತು ಪುಟಿನ್ ಮಗಳ ಮದುವೆ!

ಶುಕ್ರವಾರ, 25 ಮಾರ್ಚ್ 2022 (07:27 IST)
ಮಾಸ್ಕೋ : ಉಕ್ರೇನ್ ವಿರುದ್ಧದ ಯುದ್ಧದ ದುಷ್ಪರಿಣಾಮ ರಷ್ಯಾದ ಜನತೆ ಮೇಲಷ್ಟೇ ಅಲ್ಲ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕುಟುಂಬಕ್ಕೂ ತಟ್ಟಿದೆ.

ಉಕ್ರೇನ್ ವಿಚಾರವಾಗಿ ಪುಟಿನ್ ತೆಗೆದುಕೊಂಡ ನಿರ್ಧಾರವು ಈಗ ಅವರ ಮಗಳ ಮದುವೆಗೇ ಕಂಟಕ ಪ್ರಾಯವಾಗಿ ಪರಿಣಮಿಸಿದೆ.

ಹೌದು, ಉಕ್ರೇನ್ ಮೇಲೆ ಯುದ್ಧ ಸಾರಿದ್ದಕ್ಕಾಗಿ ಅಮೆರಿಕ ಸೇರಿದಂತೆ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾಗೆ ಹಲವು ನಿರ್ಬಂಧಗಳನ್ನು ವಿಧಿಸಿವೆ. ಪರಿಣಾಮವಾಗಿ ಪುಟಿನ್ ಅವರ ಹಿರಿಯ ಮಗಳ ಎರಡು ಮಹತ್ವಾಕಾಂಕ್ಷೆಯ ಕನಸು ನುಚ್ಚು ನೂರಾಗಿದೆ. 

ಡಾ. ಮರಿಯಾ ವೊರೊಂಟ್ಸೊವಾ (36) ಅವರೇ ವ್ಲಾಡಿಮಿರ್ ಪುಟಿನ್ ಮತ್ತು ಲ್ಯುಡ್ಮಿಲಾ ದಂಪತಿ ಹಿರಿಯ ಪುತ್ರಿ. ಮರಿಯಾ ಅವರ ಮದುವೆ ಮುರಿದು ಬಿದ್ದಿದೆ. ಇದರ ಜೊತೆಗೆ ಮರಿಯಾ ಅವರ ಆಧುನಿಕ ವೈದ್ಯಕೀಯ ಕೇಂದ್ರ ನಿರ್ಮಿಸುವ ಬಹುದೊಡ್ಡ ಕನಸು ಕನಸಾಗಿಯೇ ಉಳಿದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ