ಚೀನಾಗೆ ನೇರ ಯುದ್ಧದ ಎಚ್ಚರಿಕೆ !

ಶನಿವಾರ, 24 ಸೆಪ್ಟಂಬರ್ 2022 (15:29 IST)
ವಾಷಿಂಗ್ಟನ್ : ತೈವಾನ್ ಮೇಲೆ ಚೀನಾ ಯದ್ಧ ಸಾರಿದರೆ ಅಮೆರಿಕ ಪಡೆಗಳು ತೈವಾನ್ ಅನ್ನು ರಕ್ಷಿಸುತ್ತವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಅಮೆರಿಕ ಪಡೆಗಳು ತೈವಾನ್ ಮೇಲೆ ಚೀನಾ ಹಕ್ಕು ಪಡೆಯಲು ಸಾಧಿಸುತ್ತಿದೆ. ಇದನ್ನು ತಡೆಯುತ್ತೀರಾ ಎಂಬ ಪ್ರಶ್ನೆಗೆ ಹೌದು. ತೈವಾನ್ ಬಗೆಗಿನ ಯುಎಸ್ ನೀತಿ ಬದಲಾಗಿಲ್ಲ ಎಂದು ತಿಳಿಸಿದ್ದಾರೆ.

ಉಕ್ರೇನ್ ಯದ್ಧದಲ್ಲಿ ಅಮೆರಿಕವು ನೇರವಾಗಿ ಪಾಲ್ಗೊಂಡಿಲ್ಲ. ಬದಲಿಗೆ ಶಸ್ತ್ರಾಸ್ತ್ರ, ಸೇರಿ ಹಣಗಳನ್ನು ಪೂರೈಕೆ ಮಾಡಿದೆ. ಆದರೆ ಅದೇ ಪರಿಸ್ಥಿತಿ ತೈವಾನ್ಗೆ ಬಂದರೆ ಅಮೆರಿಕವು ಚೀನಾದ ಮೇಲೆ ನೇರವಾಗಿ ಯುದ್ಧ ಮಾಡುತ್ತಿದೆ.

ಈ ಮೂಲಕ ತೈವಾನ್ ಅನ್ನು ಚೀನಾದ ಆಕ್ರಮಣದಿಂದ ರಕ್ಷಿಸುತ್ತದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅಮೆರಿಕವು ತೈವಾನ್ ಮೇಲಿನ ದಾಳಿಗೆ ಮಿಲಿಟರಿಯಾಗಿ ಪ್ರತಿನಿಧಿಸುತ್ತದೆಯೇ ಎನ್ನುವುದನ್ನು ಅವರು ಸ್ಪಷ್ಟಪಡಿಸಲಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ