ಬ್ಯಾಲಿಸ್ಟಿಕ್ ಕ್ಷಿಪಣಿ ವಿಶೇಷತೆ ಏನು?

ಗುರುವಾರ, 21 ಏಪ್ರಿಲ್ 2022 (14:06 IST)
ಭೂಮಿಯ ವಾತಾವರಣವನ್ನು ಬಿಟ್ಟು ಬಾಹ್ಯಾಕಾಶವನ್ನು ಪ್ರವೇಶಿಸಿ ಮತ್ತೆ ಭೂಮಿಯನ್ನು ಪ್ರವೇಶಿಸಿ ಭೂಮಿಗೆ ಅಪ್ಪಳಿಸುವ ಕ್ಷಿಪಣಿಗಳಮನ್ನು ಬ್ಯಾಲಿಸ್ಟಿಕ್ ಕ್ಷಿಪಣಿ ಎಂದು ಕರೆಯಲಾಗುತ್ತಿದೆ.
 
ಈ ಕ್ಷಿಪಣಿಗಳು ವೇಗವಾಗಿ ಭೂಮಿಯ ವಾತಾವರಣ ಮರು ಪ್ರವೇಶಿಸುವಾಗ ವಾತಾವರಣದೊಂದಿಗೆ ಘರ್ಷಣೆಯುಂಟಾಗಿ ಹೆಚ್ಚಿನ ತಾಪಮಾನದಿಂದಾಗಿ ಶತ್ರುಗಳ ಕ್ಷಿಪಣಿಗಳನ್ನು ನಾಶಮಾಡಲು ಸಾಧ್ಯವಾಗುತ್ತದೆ.

ಕ್ಷಿಪಣಿಗಳು ಭೂಮಿ ಪ್ರವೇಶಿಸುವಾಗ ಭೂ ಗುರುತ್ವಾಕರ್ಷಣೆಗೆ ಒಳಗಾಗುತ್ತದೆ. ಹೀಗಾಗಿ ನಿರ್ಧಿಷ್ಟ ಗುರಿಯನ್ನು ತಲುಪುವಂತಾಗಲು ಗ್ಲೋಬಲ್ ಪೊಸಿಷನ್ ಸಿಸ್ಟಮ್(ಜಿಪಿಎಸ್) ಅಳವಡಿಸಲಾಗಿರುತ್ತದೆ.

ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಭೂಮಿಯಿಂದ, ಆಕಾಶದಿಂದ, ಸಮುದ್ರದಿಂದ, ಜಲಾಂತಗಾರ್ಮಿಯಿಂದ ಹಾಗೂ ಚಲಿಸುವ ವಾಹನಗಳ ಮೂಲಕವೂ ಉಡಾಯಿಸಬಹುದಾಗಿದೆ. ಶಬ್ದದ ವೇಗಕ್ಕಿಂತಲೂ 5 ಪಟ್ಟು ವೇಗವನ್ನು ಹೊಂದಿರುವ ಕಾರಣ ಇವುಗಳಿಗೆ ಹೈಪರ್ ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿ ಎಂದು ಕರೆಯಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ