ಪಾಶ್ಚಾತ್ಯ ದೇಶಗಳಾದ ಫಿನ್ಲೆಂಡ್ ಹಾಗೂ ಸ್ವೀಡನ್‌ಗಳು ನ್ಯಾಟೋ ದೇಶಗಳ ಕೂಟವನ್ನು ಸೇರಲು ನಡೆಸಿರುವ ಯತ್ನಗಳನ್ನು ಶುಕ್ರವಾರವೂ ರಷ್ಯಾ ವಿರೋಧಿಸಿದೆ. ಇದರೊಂದಿಗೆ ಈವರೆಗೆ ಉಕ್ರೇನ್ ದೇಶವು ನ್ಯಾಟೋ ಸೇರಲು ನಡೆಸುತ್ತಿದ್ದ ಯತ್ನವನ್ನು ವಿರೋಧಿಸುತ್ತಿದ್ದ ರಷ್ಯಾ ಈಗ ಸ್ವೀಡನ್ ಹಾಗೂ ನೆರೆ ದೇಶವಾದ ಫಿನ್ಲೆಂಡ್‌ಗಳ ನ್ಯಾಟೋ ಸೇರ್ಪಡೆಯನ್ನೂ ವಿರೋಧಿಸುತ್ತಿದ್ದು, ಸಮರಕ್ಕೆ ಹೊಸ ತಿರುವು ನೀಡುವ ಲಕ್ಷಣಗಳಿವೆ. ಈ ನಡುವೆ, ತನ್ನ ಯುದ್ಧನೌಕೆ ಉಕ್ರೇನಿ ಪಡೆಗಳ ಹೊಡೆತಕ್ಕೆ ಸಿಲುಕಿ ನಾಶವಾಗಿ ಕಪ್ಪು ಸಮುದ್ರದಲ್ಲಿ ಮುಳುಗಡೆ ಆಗಿರುವ ಕಾರಣ ರಷ್ಯಾ ಕ್ರುದ್ಧಗೊಂಡಿದೆ. ಹೀಗಾಗಿ ಉಕ್ರೇನ್‌ನ ಈ ನಡೆಗೆ ನ್ಯಾಟೋ ದೇಶಗಳ ಬೆಂಬಲ ಇದೆ ಎಂಬುದು ರಷ್ಯಾ ಗುಮಾನಿ. ಹೀಗಾಗಿ, ಇದು 3ನೇ ವಿಶ್ವಯುದ್ಧಕ್ಕೆ ಕಾರಣ ಆಗಬಹುದು ಎಂದು ರಷ್ಯಾದ ಸರ್ಕಾರಿ ಟೀವಿ ಚಾನೆಲ್ ಎಚ್ಚರಿಕೆ ನೀಡಿದೆ.