ಪ್ಯಾರಿಸ್ : ಭಾರತದಲ್ಲಿ ಗೋಧಿ ರಫ್ತುವನ್ನು ನಿಷೇಧಿಸಿದ ಬೆನ್ನಲ್ಲೇ ವಿಶ್ವ ಮಾರುಕಟ್ಟೆಯಲ್ಲಿ ಗೋಧಿ ಬೆಲೆಯು ದಾಖಲೆ ಪ್ರಮಾಣದಲ್ಲಿ ಏರಿಕೆ ಆಗಿದೆ.
ಯುರೋಪ್ ಮಾರುಕಟ್ಟೆಯಲ್ಲಿ ಪ್ರತಿ ಟನ್ಗೆ 435 ಯುರೋಗಳಿಗೆ (35,311 ರೂ.) ಏರಿಕೆ ಕಂಡಿದೆ. ಅಂದರೆ ಪ್ರತಿ ಟನ್ಗೆ ಅಂದಾಜು 1053 ರೂ.ನಷ್ಟು ಹೆಚ್ಚಳವಾಗಿದೆ.
ಗೋಧಿ ರಫ್ತು ಮಾಡುವ ರಾಷ್ಟ್ರಗಳಲ್ಲಿ ರಷ್ಯಾ ಮತ್ತು ಉಕ್ರೇನ್ ಪ್ರಮುಖವಾಗಿದ್ದವು. ಆದರೆ ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಎಲ್ಲಾ ಬೆಲೆಯೂ ಗಗನಕ್ಕೆ ಏರಿತ್ತು. ಅದರ ಜೊತೆಗೆ ಗೋಧಿಯೂ ಬೆಲೆಯೂ ಏರಿಕೆ ಆಗಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಗೋಧಿಗೆ ಹೆಚ್ಚಿನ ಬೆಲೆ ಬಂದಿತ್ತು.