ಡಿಕ್ಷನರಿ ಆಕ್ಸ್ಫರ್ಡ್ ಡಿಕ್ಷನರಿಯ ವಿರುದ್ಧ ಮಹಿಳೆಯರು ಸಿಡಿದೆದ್ದೇಕೆ?
ಶುಕ್ರವಾರ, 20 ಸೆಪ್ಟಂಬರ್ 2019 (05:43 IST)
ಲಂಡನ್ : ಜಗತ್ತಿನ ಪ್ರಸಿದ್ಧ ಡಿಕ್ಷನರಿ ಆಕ್ಸ್ಫರ್ಡ್ ಡಿಕ್ಷನರಿಯ ಪರಿಷ್ಕೃತ ಪ್ರತಿ ಬಗ್ಗೆ 30 ಸಾವಿರಕ್ಕೂ ಅಧಿಕ ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಕಾರಣವೆನೆಂದರೆ ಹೊಸ ಪದಗಳು ಭಾಷೆಯಲ್ಲಿ ಸೇರ್ಪಡೆಯಾದಂತೆಲ್ಲ ಆಯಾ ಭಾಷೆಯ ನಿಘಂಟು ಪರಿಷ್ಕರಣೆಯಾಗುತ್ತಾ ಇರುತ್ತದೆ. ಅದರೀತಿ ಇದೀಗ ಆಕ್ಸ್ಫರ್ಡ್ ಡಿಕ್ಷನರಿ ಪರಿಷ್ಕರಣೆಯಾಗಿದ್ದು, ಅದರ ಪ್ರತಿಯಲ್ಲಿ ಎಂಬ ಪದಕ್ಕೆ ಸಮಾನಾರ್ಥಕವಾಗಿ ವೇಶ್ಯೆ (Bitch) ಎಂಬ ಪದವನ್ನು ಸೇರಿಸಲಾಗಿದೆ.
ಈ ಬಗ್ಗೆ 30 ಸಾವಿರಕ್ಕೂ ಅಧಿಕ ಮಹಿಳೆಯರು ಸಹಿ ಅಭಿಯಾನ ಮಾಡಿದ್ದಾರೆ. ಅಲ್ಲದೇ ಗೂಗಲ್ ನಲ್ಲಿ ಮಹಿಳೆ(woman) ಎಂದು ಸರ್ಚ್ ಮಾಡಿದರೆ ಮೂರ್ಖಳು ಎಂಬ ಪದವೂ ಕಾಣಿಸಿಕೊಳ್ಳುತ್ತದೆ. ಈ ಬಗ್ಗೆಯೂ ಅನೇಕ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.