ಎಫ್‌ಎಟಿಎಫ್ ಅಧಿಕೃತವಾಗಿ ಪಾಕಿಸ್ತಾನವನ್ನು ‘ಗ್ರೇ ಲಿಸ್ಟ್' ಗೆ ಸೇರಿಸಲು ಕಾರಣವೇನು?

ಶುಕ್ರವಾರ, 29 ಜೂನ್ 2018 (06:54 IST)
ಫ್ರಾನ್ಸ್ : ಫ್ರಾನ್ಸ್ ನ ಉಗ್ರ ನಿಗ್ರಹ ಹಣಕಾಸು ಕಗ್ಗಾವಲು ಸಂಸ್ಥೆಯಾಗಿರುವ ಫಿನಾನ್ಶಿಯಲ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಅಧಿಕೃತವಾಗಿ ಪಾಕಿಸ್ತಾನವನ್ನು ‘ಗ್ರೇ ಲಿಸ್ಟ್' ಗೆ ಸೇರಿಸಿದೆ ಎಂಬುದಾಗಿ ತಿಳಿದುಬಂದಿದೆ.


ಪಾಕಿಸ್ತಾನಕ್ಕೆ ನೀಡಲಾಗಿದ್ದ ಎಲ್ಲ ಎಚ್ಚರಿಕೆಗಳನ್ನು ಅದು ಸಂಪೂರ್ಣವಾಗಿ ಕಡೆಗಣಿಸಿ ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸು ನೆರವು ನೀಡುವುದನ್ನು ಮುಂದುವರಿಸಿದ ಕಾರಣದಿಂದ ಇತ್ತಿಚೆಗೆ ಪ್ಯಾರಿಸ್ ನಲ್ಲಿ ಎಫ್‌ಎಟಿಎಫ್ ನ ಮಹಾಸಭೆಯನ್ನು ನಡೆಸಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು.


ಪಾಕಿಸ್ತಾನವನ್ನು ಗ್ರೇ ಲಿಸ್ಟ್ ಗೆ ಸೇರಿಸುವ ಉಪಕ್ರಮಕ್ಕೆ ಮುನ್ನ ಪಾಕಿಸ್ತಾನದ ಮಧ್ಯಾವಧಿ ಹಣಕಾಸು ಸಚಿವ ಡಾ. ಶಂಶದ್ ಅಖ್ತರ್ ಅವರು ಪಾಕಿಸ್ಥಾನವನ್ನು ಗ್ರೇ ಲಿಸ್ಟ್ ಗೆ ಸೇರಿಸಬಾರದೆಂದು ಮನವಿ ಮಾಡಿಕೊಡಿದ್ದರು ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ