ಪಾಕ್ ಸರ್ಕಾರದಿಂದ ಕಾಶ್ಮೀರವು ಭಾರತದ ಭಾಗವೆಂದು ತೋರಿಸುವ ಭೂಪಟವಿರುವ ಪಠ್ಯಪುಸ್ತಕದ ನಿಷೇಧ!

ಸೋಮವಾರ, 11 ಜೂನ್ 2018 (13:22 IST)
ಲಾಹೋರ್ :  ಪಾಕಿಸ್ತಾನದ ಪಂಜಾಬ್ ಪ್ರಾಂತದ ಖಾಸಗಿ ಶಾಲೆಗಳಲ್ಲಿ ಕಾಶ್ಮೀರವು ಭಾರತದ ಭಾಗವೆಂದು ತೋರಿಸುವ ಭೂಪಟವಿರುವ ಸಾಮಾಜಿಕ ಅಧ್ಯಯನ ಪಠ್ಯಪುಸ್ತಕಗಳನ್ನು ಪಾಕ್ ಸರಕಾರವು ನಿಷೇಧಿಸಿದೆ ಎಂಬುದಾಗಿ ತಿಳಿದುಬಂದಿದೆ.


ಆದಕಾರಣ ಖಾಸಗಿ ಶಾಲೆಗಳ ಗೋದಾಮುಗಳಲ್ಲಿರುವ ಈ ಪುಸ್ತಕಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ಪಂಜಾಬ್ ಪ್ರಾಂತದ ಎಲ್ಲಾ ಜಿಲ್ಲಾ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಪಂಜಾಬ್‌ ಪ್ರಾಂತದ ಪಠ್ಯವಿಷಯ ಹಾಗೂಪಠ್ಯಪುಸ್ತಕ ಮಂಡಳಿ (ಪಿಸಿಟಿಬಿ) ಸೂಚಿಸಿದೆ. ಹಾಗೇ ಪಾಕಿಸ್ತಾನದ ಖಾಸಗಿ ಶಾಲೆಗಳ ಎರಡನೆ, ನಾಲ್ಕನೆ, ಐದನೆ ಹಾಗೂ ಏಳು ಮತ್ತು ಎಂಟನೆಯ ತರಗತಿಯ ಸಾಮಾಜಿಕ ಅಧ್ಯಯನ ಪುಸ್ತಕದಲ್ಲಿ ಪಾಕಿಸ್ತಾನದ ಭೂಪಟದ ಕುರಿತು ವಿವಾದಾತ್ಮಕ ಪ್ರಸ್ತಾವನೆಗಳಿವೆಯೆಂದು ತಿಳಿಸಿದ ಪಿಸಿಟಿಬಿ ಪಂಜಾಬ್ ಪ್ರಾಂತದ ಖಾಸಗಿ ಶಾಲೆಗಳು ಹಾಗೂ ಪ್ರಕಾಶಕರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ