ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಯಾಕೆ?

ಮಂಗಳವಾರ, 26 ಜುಲೈ 2022 (13:11 IST)
ವಾಷಿಂಗ್ಟನ್ : ಕೆಲವೇ ದಿನಗಳಲ್ಲಿ ತ್ರೈಮಾಸಿಕ ವರದಿ ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಆರ್ಥಿಕ ಕುಸಿತವಾಗಲಿದ್ಯಾ ಎಂಬ ಪ್ರಶ್ನೆ ಈಗ ಎದ್ದಿದೆ.

ಸತತ ಎರಡು ತ್ರೈಮಾಸಿಕದಲ್ಲಿ ಜಿಡಿಪಿ ಕುಸಿತ ಕಾಣಲಿರುವುದರಿಂದ ಅಮೆರಿಕದಲ್ಲಿ ಆರ್ಥಿಕ ಕುಸಿತವಾಗುತ್ತಾ ಎಂಬ ಪ್ರಶ್ನೆಗೆ ಅಧ್ಯಕ್ಷ ಜೋ ಬೈಡನ್ ಉತ್ತರ ನೀಡಿದ್ದಾರೆ.

ನನ್ನ ದೃಷ್ಟಿಯಲ್ಲಿ ಅಮೆರಿಕವು ಎಂದಿಗೂ ಆರ್ಥಿಕ ಕುಸಿತವನ್ನು ಕಾಣುವುದಿಲ್ಲ. ನಾವು ಈ ಕ್ಷಿಪ್ರ ಬೆಳವಣಿಗೆಯಿಂದ ಸ್ಥಿರವಾದ ಬೆಳವಣಿಗೆಗೆ ಹೋಗುತ್ತೇವೆ ಎಂದು ತಿಳಿಸಿದರು.

ಈಗಾಗಲೇ ಅನೇಕ ಅಮೆರಿಕದ ಅಧಿಕಾರಿಗಳು ಹೆಚ್ಚುತ್ತಿರುವ ಆರ್ಥಿಕ ಹಿಂಜರಿತದ ಭಯವನ್ನು ಕಡಿಮೆ ಮಾಡಿದ್ದಾರೆ. ಅತ್ಯಂತ ಬಲಿಷ್ಠವಾದ ಕಾರ್ಮಿಕ ಮಾರುಕಟ್ಟೆಗಳನ್ನು ನೀಡಿದರೆ ವಿಶ್ವದ ಅತಿದೊಡ್ಡ ಆರ್ಥಿಕತೆ ಕುಸಿತವಾಗುವುದು ಅಸಂಭವ ಎಂದರು.

2020ರಿಂದ ಸಾಂಕ್ರಾಮಿಕ ರೋಗ ಕೊರೊನಾದಿಂದಾಗಿ ಆರ್ಥಿಕತೆ ಕುಸಿದಿತ್ತು. ಇದಾದ ಬಳಿಕ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಮೆರಿಕದ ಜಿಡಿಪಿ ಶೇ.1.6ರಷ್ಟು ಕುಸಿತ ಕಂಡಿತ್ತು.  ಈಗಾಗಲೇ ಹಣದುಬ್ಬರದ ವಿರುದ್ಧ ಹೋರಾಡಲು ಅಮೆರಿಕದ ಕೇಂದ್ರ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿದರವನ್ನು ಏರಿಸಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ