ಲೈಂಗಿಕ ಕಿರುಕುಳ ಆರೋಪ ಮಾಡಿದ್ದಕ್ಕೆ ಮಹಿಳೆಯನ್ನು ನೌಕರಿಯಿಂದಲೇ ಕಿತ್ತು ಹಾಕೋದಾ?!
ಈ ಝೌ ಎಂಬ ಮಹಿಳೆ ತನ್ನ ಹಿರಿಯ ಮ್ಯಾನೇಜರ್ ಒಬ್ಬರ ಮೇಲೆ ಅತ್ಯಾಚಾರ ಆರೋಪ ಮಾಡಿದ್ದರು. ಈ ಬಗ್ಗೆ ಮಹಿಳೆ ಮೇಲಧಿಕಾರಿಗಳಿಗೆ ದೂರು ನೀಡಿದ್ದರು. ಅದರಂತೆ ಮೇಲಿನಿಂದ ಆಕೆಗೆ ಇದರ ಬಗ್ಗೆ ವಿಚಾರಣೆ ನಡೆಸುವುದಾಗಿ ಭರವಸೆಯೂ ಸಿಕ್ಕಿತ್ತು.
ಆದರೆ ಇದೀಗ ಏಕಾಏಕಿ ಮ್ಯಾನೇಜರ್ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕೆ ವಜಾಗೊಳಿಸುತ್ತಿರುವುದಾಗಿ ಕಂಪನಿ ನೋಟಿಸ್ ನೀಡಿದೆ ಎಂದು ಮಹಿಳೆ ಆರೋಪಿಸಿದ್ದಾಳೆ.