ಒಂದು ತಿಂಗಳ ಹಸುಗೂಸಿಗೆ 5 ವರ್ಷದ ಅಕ್ಕನಿಂದ ಬರೆ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ತಂದೆ-ತಾಯಿ ತನ್ನ 1 ತಿಂಗಳ ತಂಗಿಯನ್ನೇ ಹೆಚ್ಚು ಮುದ್ದು ಮಾಡುತ್ತಾರೆ ಎಂದು ಅಸೂಯೆಗೊಂಡ 5 ವರ್ಷದ ಅಕ್ಕ, ತಂಗಿಗೆ ಪೋರ್ಕ್ ನಿಂದ ಬರೆ ಹಾಕಿ ಚಿತ್ರಹಿಂಸೆ ನೀಡಿದ ಘಟನೆ ಒಡಿಶಾದಲ್ಲಿ ನಡೆದಿದೆ.
ಮಗುವಿನ ಮೈಮೇಲೆ ಕೆಂಪು ಗಾಯ ಮತ್ತು ಅಳುತ್ತಿರುವುದನ್ನು ಗಮನಿಸಿ ಪೋಷಕರು ವೈದ್ಯರ ಬಳಿಗೆ ಕರೆದೊಯ್ದಿದ್ದಾರೆ. ಆದರೆ ಗಾಯ ಹೇಗಾಗುತ್ತಿದೆ ಎಂಬುದೇ ಅವರಿಗೆ ತಿಳಿಯದಾಗಿತ್ತು. ಕೊನೆಗೆ ವೈದ್ಯರ ಸಲಹೆಯಂತೆ ಮನೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದರು. ಅದರಲ್ಲಿ ಅಕ್ಕನ ಚಿತ್ರಹಿಂಸೆ ಕೃತ್ಯ ಬಯಲಾಯ್ತು. ತಂಗಿ ಹುಟ್ಟಿದ ಮೇಲೆ ಅಪ್ಪ-ಅಮ್ಮ ತನ್ನ ಮೇಲೆ ಪ್ರೀತಿ ತೋರಿಸುತ್ತಿಲ್ಲ ಎಂಬ ಬೇಸರಕ್ಕೆ ಆಕೆ ಹೀಗೆ ಮಾಡಿದಳು ಎಂದು ಅರಿವಾಗಿದೆ.