ತಮ್ಮ ಖಾಸಗಿತನಕ್ಕೆ ಧಕ್ಕೆ ತಂದಿದ್ದಕ್ಕೆ ಗೂಬೆಗಳು ಮಾಡಿದ್ದೇನು ಗೊತ್ತಾ?
ಸೋಮವಾರ, 12 ಆಗಸ್ಟ್ 2019 (08:30 IST)
ಹ್ಯಾಂಪ್ ಶೈರ್ : ತಮ್ಮ ಖಾಸಗಿತನಕ್ಕೆ ಧಕ್ಕೆ ತಂದರೆ ಮನುಷ್ಯ ಮಾತ್ರ ರೊಚ್ಚಿಗೇಳುದಲ್ಲದೆ ಪ್ರಾಣಿ ಪಕ್ಷಿಗಳೂ ಕೂಡ ಕೋಪಗೊಳ್ಳುತ್ತವೆ ಎಂಬುದಕ್ಕೆ ಬ್ರಿಟನ್ ನ ಹ್ಯಾಂಪ್‌ಶೈರ್‌ನಲ್ಲಿ ನಡೆದ ಈ ಘಟನೆಯೇ ಪ್ರಮುಖ ಸಾಕ್ಷಿ.
ಬ್ರಿಟನ್‌ನ ಹ್ಯಾಂಪ್‌ಶೈರ್‌ನಲ್ಲಿ ಎರಡು ಗೂಬೆಗಳ ಚಲನವಲನವನ್ನು ಗಮನಿಸಲು ಗುಪ್ತ ಕ್ಯಾಮರಾವನ್ನು ಇಡಲಾಗಿದೆ. ಆದರೆ ಇದನ್ನು ಕಂಡುಹಿಡಿದ ಬುದ್ಧಿವಂತ ಗೂಬೆಗಳು ತಮ್ಮ ಖಾಸಗಿತನವನ್ನು ಸೆರೆ ಹಿಡಿಯುತ್ತಿರುವ ಕ್ಯಾಮರಾವನ್ನೇ ಧ್ವಂಸ ಮಾಡಿದ್ದಾವೆ.
ಇದಕ್ಕೆ ಸಂಬಂಧಪಟ್ಟ ವಿಡಿಯೋವನ್ನು ಹಾಕ್ ಕನ್ಸರ್ವೆನ್ಸಿ ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಗೂಬೆಗಳ ಪೈಕಿ ಒಂದು ಮುಂದೆ ಬಂದು ಅದನ್ನು ಪರಿಶೀಲನೆ ಮಾಡಿ ಪಕ್ಕಕ್ಕೆ ಸರಿಯುತ್ತಲೇ ಮತ್ತೊಂದು ಗೂಬೆ ಆಗಮಿಸಿ ಅದನ್ನು ಕೆಡವಿದ ಕಾರಣ ಕ್ಯಾಮೆರಾದಲ್ಲಿ ಆಕಾಶದ ದೃಶ್ಯ ಸೆರೆಯಾಗಿದೆ.ನಂತರ ಎರಡೂ ಹಕ್ಕಿಗಳು ಸೇರಿ ಕ್ಯಾಮೆರಾವನ್ನು ಧ್ವಂಸ ಮಾಡಿವೆ.