ಅಪರೂಪದ ಈ ಆಫರ್ ಗ್ರಾಹಕರನ್ನು ಕೋವೆಂಟ್ ಗಾರ್ಡನ್ ಸ್ಟೋರ್‌ನಲ್ಲಿ ಸೆಳೆದಿದೆ. ಮೊದಲ ಬ್ಯಾಚ್ ಐಸ್‌ಕ್ರೀಂ ಪರಿಚಯಿಸಿದ ಕೆಲವೇ ದಿನಗಳಲ್ಲಿ ಮಾರಾಟವಾಗಿತ್ತು. ಬೇಬಿ ಗಾಗಾ ಐಸ್‌ಕ್ರೀಂ ವನಿಲ್ಲಾ ಮತ್ತು ಲೆಮನ್ ಸುವಾಸನೆಯಿಂದ ಕೂಡಿದ್ದು, 14 ಪೌಂಡ್‌ಗಳಿಗೆ ಮಾರಾಟವಾಗುತ್ತಿದೆ.
ಎದೆಹಾಲಿನ ಐಸ್‌ಕ್ರೀಂ ಕ್ರೀಮಿ, ಟೇಸ್ಟಿ ಆಗಿರುತ್ತದೆ. ಪ್ರತಿ ಪೌಂಡ್ ಎದೆಹಾಲಿಗೆ 15 ಡಾಲರ್ ಕೊಡಲಾಗುತ್ತದೆ. ಎದೆಹಾಲನ್ನು ಪಾಶ್ಚರೀಕರಿಸಿ, ಸಂಸ್ಕರಿಸಿ ಮಾರಾಟ ಮಾಡುವ ಪದ್ಧತಿ ಕೂಡ ಇರುತ್ತದೆ. ನಿಮ್ಮ ಮಗುವಿಗೆ ಎದೆಹಾಲು ಕಡಿಮೆಯಾದರೆ ಎದೆಹಾಲಿನ ಬ್ಯಾಂಕ್ ಆರಂಭವಾಗಿದೆ.
ಎದೆ ಹಾಲಿನ ಬ್ಯಾಂಕ್ ಚೀನಾದಲ್ಲಿ ಆರಂಭವಾಗಿದೆ. ಚೀನಾದಲ್ಲಿ ಎದೆಹಾಲಿನ ಬಿಸಿನೆಸ್ ಜೋರಾಗಿ ಸಾಗುತ್ತಿದೆಯಂತೆ.ಲಂಡನ್‌ನಲ್ಲಿ ಕೂಡ ಐಸ್‌ಕ್ರಿಮ್ ಬಯಸುವ ಜನರಿಗೆ ಅಸಾಮಾನ್ಯ ಆಯ್ಕೆಯೊಂದು ಇರುತ್ತದೆ. ಅದು ತಾಯಿಯ ಹಾಲಿನಿಂದ ತಯಾರಿಸಿದ ಐಸ್ ಕ್ರೀಂ. ಹೊಸ 'ಬೇಬಿ ಗಂಗಾ' ಸುವಾಸನೆಯನ್ನು ನೀಡಲು 15 ಮಹಿಳೆಯರ ಸ್ತನದ ಹಾಲನ್ನು ಬಳಸಿರುವುದಾಗಿ ಐಸ್ ಕ್ರೀಮ್ ತಯಾರಕರು ಮುಖಪುಟದಲ್ಲಿ ದಾಖಲಿಸುತ್ತಾರೆ.