‘ಆಫ್ಘನ್ ಕ್ರಿಕೆಟಿಗರು ಐಪಿಎಲ್ ಆಡಬಹುದಾದರೆ ಪಾಕ್ ಆಟಗಾರರು ಆಡಬಾರದೇಕೆ?’

ಬುಧವಾರ, 5 ಏಪ್ರಿಲ್ 2017 (13:49 IST)
ಮುಂಬೈ: ಅಫ್ಘಾನಿಸ್ತಾನ ಕ್ರಿಕೆಟಿಗರು ಇದೇ ಮೊದಲ ಬಾರಿ ಐಪಿಎಲ್ ಕ್ರಿಕೆಟ್ ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಇನ್ನೊಂದು ನೆರೆಯ ರಾಷ್ಟ್ರ ಪಾಕಿಸ್ತಾನದ ಕ್ರಿಕೆಟಿಗರಿಗೂ ಅವಕಾಶ ನೀಡಬಾರದೇಕೆ ಎಂದು ಬಾಲಿವುಡ್ ನಟ ರಿಷಿ ಕಪೂರ್ ಪ್ರಶ್ನಿಸಿದ್ದಾರೆ.

 

ಟ್ವಿಟರ್ ನಲ್ಲಿ ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿರುವ ಅವರು ‘ಐಪಿಎಲ್ ನಲ್ಲಿ ವಿಶ್ವದ ಎಲ್ಲಾ ಆಟಗಾರರಿದ್ದಾರೆ. ಆಫ್ಘನ್ ಆಟಗಾರರೂ ಪದಾರ್ಪಣೆ ಮಾಡುತ್ತಿದ್ದಾರೆ. ಪಾಕಿಸ್ತಾನ ಆಟಗಾರರಿಗೂ ಅವಕಾಶ ಕೊಡಿ. ಆಗ ನೋಡಿ ಪಂದ್ಯ. ನಾವು ವಿಶಾಲ ಹೃದಯಿಗಳು’ ಎಂದು ರಿಷಿ ಬರೆದುಕೊಂಡಿದ್ದಾರೆ.



ಈ ಬಾರಿಯ ಐಪಿಎಲ್ ನಲ್ಲಿ ಆಫ್ಘನ್ ಮೂಲದ ಮೊಹಮ್ಮದ್ ನಬಿ ಮತ್ತು ರಶೀದ್ ಖಾನ್ ಆಡುತ್ತಿದ್ದಾರೆ. ಆದರೆ ಉಭಯ ದೇಶಗಳ ನಡುವೆ ಸಂಬಂಧ ಹಳಸಿದ ಹಿನ್ನಲೆಯಲ್ಲಿ ಐಪಿಎಲ್ ನಲ್ಲಿ ಪಾಕ್ ಆಟಗಾರರು ಕಾಣಿಸಿಕೊಳ್ಳುವುದಿಲ್ಲ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ