ಕೋಲ್ಕೊತ್ತಾ: ಎಂ. ಎಸ್ ಧೋನಿ ಕ್ರಿಕೆಟ್ ನ ಜಂಟ್ಲ್ ಮ್ಯಾನ್ ಎಂದು ಮತ್ತೊಮ್ಮೆ ನಿರೂಪಿಸಿದ್ದಾರೆ. ಇದು ನಡೆದಿದ್ದು ಪುಣೆ ಮತ್ತು ಕೋಲ್ಕತ್ತಾ ನಡುವಿನ ಐ ಪಿ ಎಲ್ ಪಂದ್ಯದಲ್ಲಿ.
ಪುಣೆ ಬ್ಯಾಟಿಂಗ್ ಮಾಡುತ್ತಿದ್ದಾಗ 17 ನೇ ಓವರ್ ನಲ್ಲಿ ಈಘಟನೆ ನಡೆಯಿತು. ಆಗ ಕುಲದೀಪ್ ಯಾದವ್ ಧೋನಿಗೆ ಬೌಲಿಂಗ್ ಮಾಡುತ್ತಿದ್ದರು. ಬಾಲ್ ಒಂದು ಧೋನಿ ಬ್ಯಾಟ್ ವಂಚಿಸಿ ವಿಕೆಟ್ ಕೀಪರ್ ಕೈ ಸೇರಿತು.
ಫೀಲ್ಡರ್ ಗಳು ಔಟ್ ಗಾಗಿ ಮನವಿ ಸಲ್ಲಿಸಿದರೂ ಅಂಪಯರ್ ತೀರ್ಪು ನೀಡಲು ಸಿದ್ದರಿರಲಿಲ್ಲ. ಆಗ ಧೋನಿ ತಾವೇ ಅಂಪಯರ್ ತೀರ್ಪಿಗಾಗಿ ಕಾಯದೇ ಕ್ರೀಸ್ ಬಿಟ್ಟು ಪೆವೆಲಿಯನ್ ಗೆ ಹೆಜ್ಜೆ ಹಾಕಿದರು.
ಯಾಕೆಂದರೆ ಆ ಬಾಲ್ ಧೋನಿ ಬ್ಯಾಟ್ ಕಂಡೂ ಕಾಣದಂತೆ ಸವರಿತ್ತು. ಅದು ಅಂಪಯರ್ ಕಣ್ಣಿಗೆ ಬಿದ್ದಿರಲಿಲ್ಲ. ಆದರೆ ಧೋನಿ ಅದನ್ನು ಅರಿತು ತಾವೇ ಕ್ರೀಸ್ ಬಿಡುವ ಮೂಲಕ ಜಂಟ್ಲ್ ಮ್ಯಾನ್ ಎನಿಸಿಕೊಂಡರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ