ಹೈದರಾಬಾದ್: ಕಳೆದ ಬಾರಿ ಫೈನಲ್ ನಲ್ಲಿ ಸೆಣಸಿದ್ದ ಸನ್ ರೈಸರ್ಸ್ ಹೈದರಾಬಾದ್ ಮತ್ತು ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಗಳ ನಡುವಿನ ಪಂದ್ಯದೊಂದಿಗೆ ಈ ಬಾರಿಯ ಐಪಿಎಲ್ ಗೆ ಚಾಲನೆ ಸಿಗಲಿದೆ.
8 ಪ್ರತ್ಯೇಕ ನಗರಗಳಲ್ಲಿ ಪ್ರತ್ಯೇಕವಾಗಿ ಅದ್ದೂರಿಯಾಗಿ ಐಪಿಎಲ್ ಗೆ ಚಾಲನೆ ಸಿಗಲಿದೆ. ಆರಂಭಿಕ ಕಾರ್ಯಕ್ರಮಕ್ಕೆ ಬಾಲಿವುಡ್ ದಂಡೇ ಹರಿದುಬರಲಿದೆ. ಟೈಗರ್ ಶ್ರಾಫ್, ಶ್ರದ್ಧಾ ಕಪೂರ್, ಪರಿಣಿತಿ ಚೋಪ್ರಾ ಸೇರಿದಂತೆ ಹೊಸ ಕಲಾವಿದರ ನೃತ್ಯ ಮನಸೆಳೆಯಲಿದೆ.
ಇಂದಿನ ಪಂದ್ಯದಲ್ಲಿ ಬೆಂಗಳೂರು ತಂಡಕ್ಕೆ ಗಾಯಾಳುಗಳದ್ದೇ ಚಿಂತೆ. ನಾಯಕ ಕೊಹ್ಲಿ, ಎಬಿಡಿ ವಿಲಿಯರ್ಸ್, ಯುವ ಆಟಗಾರ ಸರ್ಫರಾಜ್ ವರೆಗೆ ಎಲ್ಲರೂ ಗಾಯಾಳುಗಳೇ. ಹೀಗಾಗಿ ಹೈದರಾಬಾದ್ ಕೊಂಚ ಬಲಿಷ್ಠವೆಂದೇ ಹೇಳಬಹುದು.
ಹೈದರಾಬಾದ್ ತಂಡದ ಪರ ಇದೇ ಮೊದಲ ಬಾರಿಗೆ ಐಪಿಎಲ್ ಗೆ ಆಯ್ಕೆಯಾದ ಆಫ್ಘನಿಸ್ತಾನದ ಮೊಹಮ್ಮದ್ ನಬಿ ಮತ್ತು ರಶೀದ್ ಖಾನ್ ಪದಾರ್ಪಣೆ ಮಾಡಲಿದ್ದಾರೆ. ಇಂದು ಬೆಂಗಳೂರು ಗೆದ್ದರೆ, ಕಳೆದ ಆವೃತ್ತಿಯ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಂತಾಗಿದೆ.
ಈ ಬಾರಿಯ ಐಪಿಎಲ್ ಪಂದ್ಯವನ್ನು ಉಚಿತವಾಗಿ ವೀಕ್ಷಿಸಲು ಬಿಸಿಸಿಐ ವ್ಯವಸ್ಥೆ ಮಾಡಿದೆ. ಒಟ್ಟು 21 ರಾಜ್ಯದ 36 ಪ್ರದೇಶಗಳಲ್ಲಿ ಫ್ಯಾನ್ ಪಾರ್ಕ್ ನಿರ್ಮಾಣ ಮಾಡಲಾಗಿದ್ದು, ಉಚಿತವಾಗಿ ಪಂದ್ಯದ ನೇರ ಪ್ರಸಾರ ಮಾಡಬಹುದು. ರಾಜ್ಯದಲ್ಲಿ ತುಮಕೂರು, ಹುಬ್ಬಳ್ಳಿ, ಮೈಸೂರಿನಲ್ಲಿ ಫ್ಯಾನ್ ಪಾರ್ಕ್ ನಿರ್ಮಾಣ ಮಾಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ