ನವದೆಹಲಿ: ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಆಲ್ ರೌಂಡರ್ ಪ್ರದರ್ಶನ ನೀಡಿದ ಡೆಲ್ಲಿ ಡೇರ್ ಡೆವಿಲ್ಸ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು 51 ರನ್ ಗಳಿಂದ ಸೋಲಿಸಿತು.
ಮೊದಲು ಬ್ಯಾಟ್ ಮಾಡಿದ ದೆಹಲಿ ಸ್ಯಾಮ್ ಬಿಲ್ಲಿಂಗ್ಸ್ ಮತ್ತು ಕೋರೆ ಆಂಡರ್ಸನ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಕೊನೆಯ ಐದು ಓವರ್ ಗಳಲ್ಲಿ ಯದ್ವಾತದ್ವಾ ಚಚ್ಚಿದ ದೆಹಲಿ ಬ್ಯಾಟ್ಸ್ ಮನ್ ಗಳು ಐದು ಓವರ್ ಗಳಲ್ಲಿ 62 ರನ್ ಕಲೆ ಹಾಕಿತು.
ನಂತರ ಬ್ಯಾಟ್ ಮಾಡಿದ ಪಂಜಾಬ್ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಯಿತು. ದೆಹಲಿ ಪರ ಸ್ಪಿನ್ನರ್ ನದೀಂ ಶಹಬಾಜ್ ಮಾರಕ ದಾಳಿ ಸಂಘಟಿಸಿ ಪ್ರಮುಖ ಮೂರು ವಿಕೆಟ್ ಕಿತ್ತರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ