ಐಪಿಎಲ್: ಥ್ರಿಲ್ಲಿಂಗ್ ಪಂದ್ಯದಲ್ಲಿ ಹೃದಯ ಗೆದ್ದ ಜಸ್ಪ್ರೀತ್ ಬುಮ್ರಾ

ಭಾನುವಾರ, 30 ಏಪ್ರಿಲ್ 2017 (07:31 IST)
ರಾಜ್ ಕೋಟ್: ಕಿರು ಮಾದರಿ ಕ್ರಿಕೆಟ್ ನ ಎಲ್ಲಾ ರೋಚಕತೆ ನೋಡಬೇಕೆಂದಿದ್ದ ಪ್ರೇಕ್ಷಕರಿಗೆ ನಿನ್ನೆ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಲಯನ್ಸ್ ತಂಡದ ನಡುವೆ ನಡೆದ ಪಂದ್ಯ ನೀಡಿತ್ತು.

 
ಈ ಪಂದ್ಯದಲ್ಲಿ ಚೇಸಿಂಗ್ ಮಾಡಲು ಗುಜರಾತ್ ನೀಡಿದ್ದು ಕೇವಲ 153 ರನ್. ಹಾಗಿದ್ದರೂ, ಮುಂಬೈ  ಇಂಡಿಯನ್ಸ್ ಅದ್ಭುತ ಬೌಲಿಂಗ್ ಮತ್ತು ಫೀಲ್ಡಿಂಗ್ ನಿಂದಾಗಿ ಪಂದ್ಯ ಸೂಪರ್ ಓವರ್ ಗೆ ತಲುಪಿತು.

ಈ ಸಂದರ್ಭದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಪರ ಕಿರಾನ್ ಪೊಲಾರ್ಡ್ ಮತ್ತು ಫ್ಲಾಕ್ನರ್ 11 ರನ್ ಗುರಿ ನೀಡಿದರು. ಆರು ಬಾಲ್ ಗಳಲ್ಲಿ ಸುಲಭವಾಗಿ ಗುಜರಾತ್ ಈ ಮೊತ್ತ ದಾಟಬಹುದಿತ್ತು. ಆದರೆ ಬುಮ್ರಾ ಮ್ಯಾಜಿಕ್ ಮಾಡಿದರು.

ಮೊದಲು ಮೂರು ಬೌಲ್ ಗಳನ್ನು ಬುಮ್ರಾ ನೋ ಬಾಲ್ ಮತ್ತು ವೈಡ್ ಎಸೆತ ಹಾಕಿದರು. ಆದರೆ ನಂತರದ ಎಸೆತಗಳಲ್ಲಿ ಬ್ಯಾಟ್ಸ್ ಮನ್ ಗಳಿಗೆ ಕೇವಲ 6 ರನ್ ನೀಡಿ ತಂಡಕ್ಕೆ ಜಯ ಕೊಡಿಸಿದರು. ಇದರೊಂದಿಗೆ ಬುಮ್ರಾ ತಾವೇಕೆ ಭಾರತ ತಂಡಕ್ಕೆ ಪ್ರಮುಖ ಅಸ್ತ್ರವಾಗಬಲ್ಲರು ಎಂಬುದನ್ನು ತೋರಿಸಿಕೊಟ್ಟರು.

ಇದೀಗ ಈ ಸೋಲಿನೊಂದಿಗೆ ಪ್ಲೇ ಆಫ್ ಗೆ ಅರ್ಹತೆ ಪಡೆಯುವ ಗುಜರಾತ್ ಕನಸು ಕ್ಷೀಣಿಸಿದೆ. ಅತ್ತ ಮುಂಬೈ ಇಂಡಿಯನ್ಸ್ ಅಗ್ರ ನಾಲ್ಕರೊಳಗೆ ಸ್ಥಾನ ಪಡೆಯಲು ಸಫಲವಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ