ಹೈದರಾಬಾದ್: ಕ್ಲಾಸ್ ಆಟಗಾರರು ಸಿಡಿದರೆ ಅದರ ಪರಿಣಾಮವೇ ಬೇರೆ ಎನ್ನುವುದನ್ನು ಡೇವಿಡ್ ವಾರ್ನರ್ ತೋರಿಸಿಕೊಟ್ಟರು. ಬಿರುಗಾಳಿಯಂತೆ ಸಿಡಿದ ಅವರ ಶತಕದ ನೆರವಿನಿಂದ ಹೈದರಾಬಾದ್ ತಂಡ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ 48 ರನ್ ಗಳ ಗೆಲುವು ದಾಖಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡದ ಪರ ನಾಯಕ ಡೇವಿಡ್ ವಾರ್ನರ್ 59 ಎಸೆತಗಳಲ್ಲಿ ಅಮೋಘ 126 ರನ್ ಸಿಡಿಸಿದರು. ಇದರಲ್ಲಿ 10 ಬೌಂಡರಿ ಮತ್ತು 8 ಸಿಕ್ಸರ್ ಗಳಿದ್ದವು. ಇದರೊಂದಿಗೆ ಹೈದರಾಬಾದ್ 3 ವಿಕೆಟ್ ನಷ್ಟಕ್ಕೆ 209 ರನ್ ಪೇರಿಸಿತು.
ಬೃಹತ್ ಮೊತ್ತ ಬೆನ್ನಲು ಉತ್ತಮ ಆರಂಭ ಬೇಕು. ಆದರೆ ಕೆಕೆಆರ್ 12 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ರಾಬಿನ್ ಉತ್ತಪ್ಪ ಅರ್ಧಶತಕ ಮತ್ತು ಮನೀಶ್ ಪಾಂಡೆ 39 ನರ್ ಗಳ ಕಿರು ಇನಿಂಗ್ಸ್ ಆಡಿದರೂ ಅದು ಸಾಕಾಗಲಿಲ್ಲ.
ಅಂತಿಮವಾಗಿ ಕೋಲ್ಕೊತ್ತಾ 20 ಓವರ್ ಗಳಲ್ಲಿ 7ವಿಕೆಟ್ ನಷ್ಟಕ್ಕೆ 161 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಹೈದರಾಬಾದ್ ಗೆ 48 ರನ್ ಗಳ ಗೆಲುವು ದಕ್ಕಿತು. ಅಂಕ ಪಟ್ಟಿಯಲ್ಲಿ ಹೈದರಾಬಾದ್ ಗಿಂತ ಮೇಲ್ಪಂಕ್ತಿಯಲ್ಲಿ ಮೆರೆದಾಡುತ್ತಿದ್ದ ಕೆಕೆಆರ್ ಗೆ ಗರ್ವಭಂಗವಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ