ಐಪಿಎಲ್: ರೋಹಿತ್ ಶರ್ಮಾಗೆ ಮತ್ತೊಮ್ಮೆ ಶಿಕ್ಷೆ

ಬುಧವಾರ, 26 ಏಪ್ರಿಲ್ 2017 (07:30 IST)
ನವದೆಹಲಿ: ಅಂಪಾಯರ್ ತೀರ್ಪಿಗೆ ಅಸಮಧಾನ ವ್ಯಕ್ತಪಡಿಸಿ, ಮೈದಾನದಲ್ಲಿ ಅಶಿಸ್ತಿನ ವರ್ತನೆ ತೋರಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾಗೆ ಶೇ. 50 ರಷ್ಟು ದಂಡ ವಿಧಿಸಲಾಗಿದೆ.

 
ಪುಣೆ ರೈಸರ್ಸ್ ವಿರುದ್ಧ ಆಡುವಾಗ ರೋಹಿತ್ ಶರ್ಮಾ ಕೊನೆಯ ಓವರ್ ನಲ್ಲಿ ಅಂಪಾಯರ್ ವೈಡ್ ಎಸೆತವನ್ನು ವೈಡ್ ಎಂದು ತೀರ್ಪು ನೀಡದೇ ಇದ್ದುದಕ್ಕೆ ಅಂಪಾಯರ್ ಎಸ್ ರವಿ ಬಳಿ ವಾಗ್ವಾದ ನಡೆಸಿದ್ದರು.

ರೋಹಿತ್ ಶರ್ಮಾರನ್ನು ಬಿಡಿಸಲು ಸ್ಕ್ವೇರ್ ಲೆಗ್ ಅಂಪಾಯರ್ ಮಧ್ಯಪ್ರವೇಶಿಸಬೇಕಾಯಿತು. ಪಂದ್ಯದ ನಂತರ ಮುಂಬೈ ಆಟಗಾರ ಹರ್ಭಜನ್ ಸಿಂಗ್ ಕೂಡಾ ತಮ್ಮ ನಾಯಕನ ವರ್ತನೆಯನ್ನು ಸಮರ್ಥಿಸಿಕೊಂಡಿದ್ದರು.

ರೋಹಿತ್ ವೈಡ್ ಎಸೆತ ಎಂದು ಘೋಷಿಸಲು ಏನು ನಿಯಮ ಇರಬೇಕೆಂದು ಅಂಪಾಯರ್ ಬಳಿ ಪ್ರಶ್ನಿಸಲು ಬಯಸಿದ್ದರು. ಹಾಗಾಗಿ ಅದನ್ನು ಅವರು ಚರ್ಚಿಸಿದ್ದರು ಎಂದು ಭಜಿ ಸಮಜಾಯಿಷಿ ನೀಡಿದ್ದಾರೆ.

ಇದೊಂದು ತೀರ್ಪಿನಿಂದಾಗಿ ಪಂದ್ಯ ಪುಣೆ ಪಾಲಾಯಿತು. ಕೊನೆಯ ಎಸೆತದಲ್ಲಿ ಹರ್ಭಜನ್ ಸಿಂಗ್ ಸಿಕ್ಸರ್ ಸಿಡಿಸಿದ್ದರೂ, ಪ್ರಯೋಜನವಾಗಲಿಲ್ಲ. ಆದರೆ ಆಘಾತಕಾರಿ ಸೋಲಿನ ಜತೆಗೆ ಮುಂಬೈ ಇಂಡಿಯನ್ಸ್ ನಾಯಕನಿಗೆ ದಂಡದ ಶಿಕ್ಷೆಯೂ ಲಭಿಸಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ