ಐಪಿಎಲ್: ಛೇ… ಆರ್ ಸಿಬಿಗೆ ಇದೆಂಥಾ ಅವಮಾನ!

ಸೋಮವಾರ, 24 ಏಪ್ರಿಲ್ 2017 (06:44 IST)
ಬೆಂಗಳೂರು: ಈ ಆವೃತ್ತಿಯಲ್ಲಿ ಇದುವರೆಗೆ ನಡೆದ ಪಂದ್ಯಗಳಲ್ಲಿ ಆರ್ ಸಿಬಿ ಹೆಚ್ಚಿನ ಪಂದ್ಯಗಳನ್ನು ಸೋತಿತ್ತು. ಆದರೆ ನಿನ್ನೆಯ ಸೋಲು ಮಾತ್ರ ತೀರಾ ಅವಮಾನಕಾರಿಯಾಗಿತ್ತು.


ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಗೆಲುವಿಗೆ 132 ರನ್ ಗಳಿಸಿದ್ದರೂ ಸಾಕಿತ್ತು. ಆದರೆ ಅದನ್ನೂ ಮಾಡಲಾಗದೆ ಜುಜುಬಿ 49 ರನ್ ಗಳಿಗೆ ಆಲೌಟ್ ಆಗುವ ಮೂಲಕ82 ರನ್ ಗಳಿಂದ ಸೋಲನುಭವಿಸಿತು. ಅಲ್ಲದೆ ಕನಿಷ್ಟ ಮೊತ್ತಕ್ಕೆ ಆಲೌಟ್ ಆದ ಕುಖ್ಯಾತಿಗೆ ಪಾತ್ರವಾಯಿತು.

ಆರ್ ಸಿಬಿ ಪರ ನಾಯಕ ಕೊಹ್ಲಿ ಶೂನ್ಯ ಸಂಪಾದಿಸಿದರೆ, ಎಬಿಡಿ ವಿಲಿಯರ್ಸ್ 8 ರನ್ ಹಾಗೂ ಕ್ರಿಸ್ ಗೇಲ್ 7 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಕೇದಾರ್ ಜಾದವ್ 9 ರನ್ ಗಳಿಸಿದ್ದೇ ಗರಿಷ್ಟ ಸ್ಕೋರ್. ಆರ್ ಸಿಬಿ ಬೆನ್ನುಲುಬು ಮುರಿದಿದ್ದು ಕಲ್ಟೆರ್ ನಿಲೆ (3 ವಿಕೆಟ್) ಮತ್ತು ಕ್ರಿಸ್ ವೋಕ್ಸ್ (3 ವಿಕೆಟ್).

ಪಂದ್ಯಕ್ಕೆ ಮೊದಲು ಸ್ವಲ್ಪ ಮಳೆ ಸುರಿದಿದ್ದು ಕೆಕೆಆರ್ ಬೌಲರ್ ಗಳಿಗೆ ನೆರವಾಯಿತು. ಆದರೂ ವಿರಾಟ್ ಕೊಹ್ಲಿಗೆ ಇದು ತೀರಾ ಅವಮಾನ ತಂದ ಸೋಲು ಎಂದರೆ ತಪ್ಪಾಗಲಾರದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ