ಮುಂಬೈ: ಅದ್ಯಾವ ಗಳಿಗೆಯಲ್ಲಿ ರವೀಂದ್ರ ಜಡೇಜಾ ಹೊಸ ಹೇರ್ ಸ್ಟೈಲ್ ನೊಂದಿಗೆ ಐಪಿಎಲ್ ಗೆ ಎಂಟ್ರಿ ಕೊಟ್ಟರೋ. ಇದೀಗ ಕ್ರಿಕೆಟಿಗರಲ್ಲಿ ಅದು ಹೊಸ ಟ್ರೆಂಡ್ ಸೃಷ್ಟಿಸುತ್ತಿದೆ.
ಜಡೇಜಾ ಸ್ಟೈಲ್ ವಿರಾಟ್ ಕೊಹ್ಲಿಯ ಗಮನ ಸೆಳೆದಿತ್ತು. ಇದೀಗ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಹಾರ್ದಿಕ್ ಪಾಂಡ್ಯ ಅದೇ ರೀತಿ ಕೂದಲು ಕತ್ತರಿಸಿಕೊಂಡು ಬಂದು ಟ್ವಿಟರ್ ನಲ್ಲಿ ಫೋಟೋ ಸಮೇತ ಜಡೇಜಾಗೆ ಮೆಸೇಜ್ ಮಾಡಿದ್ದಾರೆ.
‘ನೋಡಪ್ಪ ಜಡ್ಡು, ಇದು ನಿನಗೋಸ್ಕರ’ ಎಂದಿದ್ದಾರೆ. ಇವರಿಬ್ಬರು ಹೀಗೆ ಮಾಡಿದ ಮೇಲೆ ಇನ್ನು ಭಾರತೀಯ ಕ್ರಿಕೆಟ್ ನ ಅಭಿಮಾನಿಗಳೂ ಇದೇ ಹೇರ್ ಸ್ಟೈಲ್ ನ ಮೋಡಿಗೆ ಬೀಳದೇ ಇದ್ದಾರೆಯೇ?
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ