ಸುರೇಶ್ ರೈನಾ ಅಟೋಗ್ರಾಫ್ ಗಾಗಿ ಪಂದ್ಯವನ್ನೇ ನಿಲ್ಲಿಸಿದ ಅಭಿಮಾನಿ

ಶುಕ್ರವಾರ, 12 ಮೇ 2017 (07:10 IST)
ರಾಜ್ ಕೋಟ್: ಕಳೆದ ವರ್ಷ ಅತೀ ಹೆಚ್ಚು ಪಂದ್ಯಗಳಿಗೆ ಗೈರಾಗುವ ಮೂಲಕ ಸುರೇಶ್ ರೈನಾ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿಬರಬಹುದು. ಆದರೆ ಅವರನ್ನು ಆರಾಧಿಸುವವರಿಗೆ ಇದ್ಯಾವುದೂ ಬಾಧಕವಾಗಿಲ್ಲ.

 
ಡೆಲ್ಲಿ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ತಂಡ ಆಡುತ್ತಿದ್ದಾಗ ಸುರೇಶ್ ರೈನಾಗೆ ಇಂತಹದ್ದೊಂದು ಅಭಿಮಾನದ ಬಿಸಿ ತಾಕಿತು. ಗುಜರಾತ್ ತಂಡದ ನಾಯಕರಾಗಿರುವ ರೈನಾ ಫೀಲ್ಡಿಂಗ್ ಮಾಡುತ್ತಿದ್ದಾಗ ಅಭಿಮಾನಿಯೊಬ್ಬ ಆಟೋಗ್ರಾಫ್ ಗಾಗಿ ಮೈದಾನಕ್ಕೆ ನುಗ್ಗಿದ.

ಆತನ ಈ ವರ್ತನೆಯಿಂದಾಗಿ ಪಂದ್ಯವೇ ಕೆಲ ಕಾಲ ಸ್ಥಗಿತಗೊಂಡಿತು. ಆತನನ್ನು ತಡೆಯಲು ಅಧಿಕಾರಿಗಳು ಪ್ರಯತ್ನಿಸುವಷ್ಟರಲ್ಲಿ ಆತ ಬಿಳಿ ಹಾಳೆ, ಪೆನ್ನು ತೆಗೆದುಕೊಂಡು ರೈನಾ ಕಾಲ ಬುಡದಲ್ಲಿ ಮಂಡಿಯೂರಿ ಆಟೋಗ್ರಾಫ್ ನೀಡುವಂತೆ ಮನವಿ ಮಾಡುತ್ತಿದ್ದ.

ತಕ್ಷಣ ಅಂಪಾಯರ್ ಮಧ್ಯಪ್ರವೇಶಿಸಿ ಆತನನ್ನು ಮೈದಾನದಿಂದ ಹೊರಹೋಗುವಂತೆ ಸೂಚಿಸಿದರು. ರೈನಾ ಕೂಡಾ ತಮ್ಮ ಅಭಿಮಾನಿಯ ಕೈ ಕುಲುಕಿ ಬೀಳ್ಕೊಟ್ಟರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ