ಬಹುಮಾನ ಟ್ರೋಫಿಯನ್ನು ಅಭಿಮಾನಿಗೆ ನೀಡಿದ ವಿರಾಟ್ ಕೊಹ್ಲಿ

ಬುಧವಾರ, 17 ಮೇ 2017 (07:19 IST)
ನವದೆಹಲಿ: ವಿರಾಟ್ ಕೊಹ್ಲಿಗೆ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ನಿರೀಕ್ಷಿಸಿದ ಯಶಸ್ಸು ಸಿಗಲಿಲ್ಲ. ಆದರೆ ಕೊನೆಯ ಪಂದ್ಯದಲ್ಲಿ ಗೆಲುವು ಕಂಡ ಅವರು ಅಭಿಮಾನಿಯೊಬ್ಬರಿಗೆ ನಿಜಕ್ಕೂ ದೇವರಾದರು.

 
ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಬಿರುಸಿನ 58 ರನ್ ಗಳಿಸಿದ್ದರು. ಕೊಹ್ಲಿ ಪ್ರತೀ ರನ್ ಗಳಿಸಿದಾಗಲೂ ಅಭಿಮಾನಿಗಳು ಹುಚ್ಚೆದ್ದು ಕುಣಿದು ಪ್ರೋತ್ಸಾಹಿಸುತ್ತಿದ್ದರು. ಇದರಿಂದಾಗಿ ಕೊಹ್ಲಿಯೂ ಭಾರೀ ಖುಷ್ ಆಗಿದ್ದರು.

ಪಂದ್ಯ ಮುಗಿದ ನಂತರ ಕೊಹ್ಲಿ ಸ್ಟೈಲಿಶ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಪ್ರಶಸ್ತಿ ರೂಪದಲ್ಲಿ ಅವರಿಗೆ ಒಂದು ಟ್ರೋಫಿ ಸಿಕ್ಕಿತ್ತು. ಇದನ್ನು ಅವರು ತಮ್ಮ ಬಳಿ ಇಟ್ಟುಕೊಳ್ಳಲಿಲ್ಲ.

ಬದಲಿಗೆ ನೇರವಾಗಿ ಬೌಂಡರಿ ಗೆರೆ ಬಳಿ ಸಾಗಿ, ಅಲ್ಲಿದ್ದ ತಡೆಗೋಡೆಯನ್ನು ಹಾರಿ ನೇರವಾಗಿ ಅಭಿಮಾನಿಗಳತ್ತ ಸಾಗಿದರು. ನಂತರ ಯಾರೋ ಒಬ್ಬ ಅಭಿಮಾನಿಯನ್ನು ಕರೆದು ಆ ಟ್ರೋಫಿಯನ್ನು ಅವರಿಗೆ ಉಡುಗೊರೆಯಾಗಿ ನೀಡಿದರು. ಇದೀಗ ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ. ಕೊಹ್ಲಿ ಹಾಗ್ಯಾಕೆ ಮಾಡಿದರು ಎಂದು ಇನ್ನಷ್ಟೇ ತಿಳಿಯಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ