ಮುಂದಿನ ಅಮೆರಿಕಾ ಅಧ್ಯಕ್ಷರ ರೇಸ್ ನಲ್ಲಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್!

ಶನಿವಾರ, 1 ಏಪ್ರಿಲ್ 2017 (09:59 IST)
ನವದೆಹಲಿ: ಅಮೆರಿಕಾ ಅಧ್ಯಕ್ಷರಾಗುವವರ ರೇಸ್ ನಲ್ಲಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಇದ್ದಾರಂತೆ! ಇದೇನಿದು? ಅಪ್ಪಟ ಭಾರತೀಯ ಸೆಹ್ವಾಗ್, ಅಮೆರಿಕಾ ಅಧ್ಯಕ್ಷರಾಗುವುದು ಹೇಗೆ?

 

ಪ್ರಶ್ನೆ ಮೂಡುವುದು ಸಹಜ. ಸೆಹ್ವಾಗ್ ಆಗಾಗ ಅಮೆರಿಕಾ ಪ್ರವಾಸ ಮಾಡುತ್ತಿರುವುದರಿಂದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಮತ್ತು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಭಾರೀ ನಿಕಟವರ್ತಿಯಾಗಿದ್ದಾರಂತೆ.

 
ಹೀಗಾಗಿ ಅವರು ಮುಂದಿನ ಚುನಾವಣೆಗೆ ಪ್ರಬಲ ಸ್ಪರ್ಧಿಯಾಗಲಿದ್ದಾರಂತೆ. ಈ ಬಗ್ಗೆ ಹಾಲಿ ಅಧ್ಯಕ್ಷರು ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆಗೆ ಮಾತುಕತೆ ನಡೆಸಿದ್ದಾರಂತೆ. ಎಲ್ಲಾ ಸರಿ ಹೋದರೆ ಸೆಹ್ವಾಗ್ ಮುಂದಿನ ಅಧ್ಯಕ್ಷರಾಗುತ್ತಾರೆ. ಹಾಗಂತ ಅವರೇ ಅಮೆರಿಕಾ ಮಾಧ್ಯಮವೊಂದರ ತುಣುಕನ್ನು ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ!

 
ಆದರೆ ಗಾಬರಿಯಾಗಬೇಕಿಲ್ಲ. ಇದೆಲ್ಲಾ ಅವರ ಏಪ್ರಿಲ್ 1 ರ ಮಹಿಮೆ! ಏಪ್ರಿಲ್ ಫೂಲ್ ಮಾಡಲು ಹೀಗೊಂದು ಟ್ರಿಕ್ ಬಳಸಿದ್ದಾರೆ ವೀರೂ. ಕಳೆದ ವರ್ಷ ತಾವು ಮತ್ತೆ ರಿಟೈರ್ ಮೆಂಟ್ ಹಿಂಪಡೆದು ಕ್ರಿಕೆಟ್ ಗೆ ಮರಳುತ್ತಿರುವುದಾಗಿ ಹೇಳಿ ಅಭಿಮಾನಿಗಳನ್ನು ಫೂಲ್ ಮಾಡಿದ್ದರು. ಈ ವರ್ಷ ಅಮೆರಿಕಾ ಅಧ್ಯಕ್ಷರ ಪದವಿಗೇ ಕಣ್ಣು ಹಾಕಿದ್ದಾರೆ!

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ