ಸನ್ನಿ ಲಿಯೋನ್ ಗೆ ಜೋಡಿಯಾಗಲಿದ್ದಾರಂತೆ ವೀರೇಂದರ್ ಸೆಹ್ವಾಗ್

ಸೋಮವಾರ, 1 ಮೇ 2017 (08:24 IST)
ನವದೆಹಲಿ: ಕ್ರಿಕೆಟಿಗ ವೀರೇಂದರ್ ಸೆಹ್ವಾಗ್ ಪಡ್ಡೆ ಹೈಕಳ ಮನಸ್ಸು ಕದ್ದ ಸನ್ನಿ ಲಿಯೋನ್ ಗೆ ಜೋಡಿಯಾಗಲಿದ್ದಾರಂತೆ! ಗಾಬರಿಯಾಗಬೇಡಿ. ಸೆಹ್ವಾಗ್ ಸನ್ನಿಗೆ ಜತೆ ನೀಡಲಿರುವುದು ಬೇರೇನಕ್ಕೂ ಅಲ್ಲ!

 
ಯುಸಿ ನ್ಯೂಸ್ ವಾಹಿನಿಗೆ ಸನ್ನಿ ಮಸಾಲಾ ಕಾಮೆಂಟರಿ ನೀಡುತ್ತಿದ್ದಾರೆ. ಇದುವರೆಗೆ ಕಾಮೆಡಿಯನ್ ಸುನಿಲ್ ಗ್ರೋವರ್ ಜತೆ ಕಾಮೆಂಟರಿ ಮಾಡುತ್ತಿದ್ದ ಸನ್ನಿ ಲಿಯೋನ್ ಹೊಸ ಜತೆಗಾರನಿಗಾಗಿ ಹುಡುಕುತ್ತಿದ್ದರಂತೆ. ಅವರಿಗೀಗ ವೀರೂ ಜತೆಯಾಗುತ್ತಿದ್ದಾರೆ.

ಇಬ್ಬರೂ ಈ ಬಗ್ಗೆ ಟ್ವಿಟರ್ ನಲ್ಲಿ ಮಾತಿನ ವಿನಿಮಯ ಮಾಡಿಕೊಂಡಿದ್ದಾರೆ. ನನ್ನ ಜತೆ ಕಾಮೆಂಟರಿ ಮಾಡಲು ಬರುತ್ತಾರೆ ನೋಡುತ್ತಿರಿ ಎಂದು ಸನ್ನಿ ಟ್ವೀಟ್ ಮಾಡಿದ್ದಾರೆ. ವೀರೂ ಕೂಡಾ ನಾನು ಸನ್ನಿ ಜತೆ ಕಾಮೆಂಟರಿ ಮಾಡಲು ಸಿದ್ಧ ಎಂದಿದ್ದಾರೆ.

ಸೆಹ್ವಾಗ್ ಮೊದಲೇ ಮಾತಲ್ಲೇ ಕಿಕ್ ಕೊಡುವವರು. ಸನ್ನಿ ನೋಟದಲ್ಲೇ ಕಿಕ್ ನೀಡುವಾಕೆ. ಇಬ್ಬರೂ ಸೇರಿ ವೀಕ್ಷಕರಿಗೆ ಏನು ಮೋಡಿ ಮಾಡುತ್ತಾರೆ ಎಂದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ