ಮುಂಬೈ: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾಗೆ ನಿನ್ನೆ ಜನುಮದಿನದ ಸಂಭ್ರಮ. ಆದರೆ ರೋಹಿತ್ ಗೆ ಮಧ್ಯರಾತ್ರಿ ಭರ್ಜರಿ ಗಿಫ್ಟ್ ಸಿಕ್ಕಿತಂತೆ. ಆದರೆ ಗಿಫ್ಟ್ ಕೊಟ್ಟವರು ಪತ್ನಿಯಂತೂ ಅಲ್ಲ!
ಇನ್ಯಾರು ಎಂದು ಅಚ್ಚರಿಪಡಬೇಕಿಲ್ಲ. ಅಷ್ಟಕ್ಕೂ ಇದು ರೋಹಿತ್ ಶರ್ಮಾಗೆ ಮಾತ್ರ ಸಿಕ್ಕಿದ ಗಿಫ್ಟ್ ಅಲ್ಲ. ಇಡೀ ಅಭಿಮಮಾನಿಗಳಿಗೇ ಸಿಕ್ಕಿದ ಉಡುಗೊರೆ. ಅಂದ ಹಾಗೆ ಈ ಉಡುಗೊರೆ ಕೊಟ್ಟಿದ್ದು, ಜಸ್ಪ್ರೀತ್ ಬುಮ್ರಾ.
ಬುಮ್ರಾ ಗುಜರಾತ್ ಲಯನ್ಸ್ ವಿರುದ್ಧ ಸೂಪರ್ ಓವರ್ ನಲ್ಲಿ ಪಂದ್ಯ ಗೆಲ್ಲಿಸಿಕೊಟ್ಟಾಗ ಸಮಯ 12.20 ಆಗಿತ್ತು. ಅಂದರೆ ರೋಹಿತ್ ಬರ್ತ್ ಡೇ ಬಂದಿತ್ತು. ಹಾಗಾಗಿ ಇದು ನನಗೆ ಮಧ್ಯರಾತ್ರಿ ಸಿಕ್ಕಿದ ಬರ್ತ್ ಡೇ ಗಿಫ್ಟ್ ಎಂದು ರೋಹಿತ್ ಹೇಳಿಕೊಂಡಿದ್ದಾರೆ.
ರೋಹಿತ್ ನಿನ್ನೆ 30 ವರ್ಷಕ್ಕೆ ಕಾಲಿಟ್ಟಿದ್ದರು. ಪಂದ್ಯ ಮುಗಿದ ನಂತರ ಮುಂಬೈ ಇಂಡಿಯನ್ಸ್ ತಂಡದ ಸದಸ್ಯರು ಕೇಕ್ ಕಟ್ ಮಾಡಿಸಿ ನಾಯಕನ ಬರ್ತ್ ಡೇಯನ್ನು ಸ್ಪೆಷಲ್ಲಾಗಿ ಆಚರಿಸಿಕೊಂಡರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ