ಐಪಿಎಲ್: ರಿಷಬ್ ಪಂತ್ ಮ್ಯಾಚ್ ಫಿಕ್ಸಿಂಗ್ ಗುಮಾನಿಗೆ ಬಿಸಿಸಿಐ ಕೊಟ್ಟ ಪ್ರತಿಕ್ರಿಯೆ

ಮಂಗಳವಾರ, 2 ಏಪ್ರಿಲ್ 2019 (06:00 IST)
ಮುಂಬೈ: ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಸ್ಟಂಪ್ ಹಿಂದುಗಡೆ ನಿಂತು ಆಡಿದ ಮಾತೊಂದು ಮ್ಯಾಚ್ ಫಿಕ್ಸಿಂಗ್ ಗುಮಾನಿ ಹುಟ್ಟಲು ಕಾರಣವಾಗಿತ್ತು.


ವಿಕೆಟ್ ಕೀಪಿಂಗ್ ಮಾಡುತ್ತಿದ್ದ ರಿಷಬ್, ರಾಬಿನ್ ಉತ್ತಪ್ಪ ಬ್ಯಾಟಿಂಗ್ ಮಾಡುತ್ತಿದ್ದಾಗ ಈ ಎಸೆತ ಈಗ ಬೌಂಡರಿ ಆಗಲಿದೆ ಎಂದು ಮೊದಲೇ ಅಂದಾಜಿಸಿ ಮಾತನಾಡಿದ್ದು ಸ್ಟಂಪ್ ಮೈಕ್ರೋಫೋನ್ ನಲ್ಲಿ ಸ್ಪಷ್ಟವಾಗಿತ್ತು. ಅಚ್ಚರಿಯೆಂದರೆ ಉತ್ತಪ್ಪ ಆ ಎಸೆತವನ್ನು ಬೌಂಡರಿಗಟ್ಟಿದ್ದರು.

ಈ ಮೂಲಕ ಇದು ಮ್ಯಾಚ್ ಫಿಕ್ಸಿಂಗ್ ಆಗಿರಬಹುದೇ ಎಂಬ ಅನುಮಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ಇದೀಗ ಸ್ಪಷ್ಟನೆ ನೀಡಿರುವ ಬಿಸಿಸಿಐ ಯಾರೂ ರಿಷಬ್ ಏನು ಹೇಳಿದ್ದಾರೆಂಬುದನ್ನು ಸರಿಯಾಗಿ ಕೇಳಿಸಿಕೊಂಡಿಲ್ಲ.  ರಿಷಬ್ ತಮ್ಮ ನಾಯಕನಿಗೆ ಈ ಎಸೆತ ಫೋರ್ ಹೋಗಬಹುದು, ಫೀಲ್ಡಿಂಗ್ ಹೆಚ್ಚು ಮಾಡಿ ಎಂದಿದ್ದರು. ಮ್ಯಾಚ್ ಫಿಕ್ಸಿಂಗ್ ಎಲ್ಲಾ ಶುದ್ಧ ನಿರಾಧಾರ’ ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ