ದ್ವಿತೀಯ ಪಿಯುಸಿ ಪರೀಕ್ಷೆ ನಡುವೆಯೇ ಆರ್ ಸಿಬಿ ಪರ ಕ್ರಿಕೆಟ್ ಆಡುತ್ತಿರುವ ಪ್ರಯಾಸ್
ಕೋಲ್ಕೊತ್ತಾದ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಪ್ರಯಾಸ್ ಭಾನುವಾರದ ಪಂದ್ಯ ಮುಗಿದ ತಕ್ಷಣ ತವರಿಗೆ ತೆರಳಿದ್ದು, ಪರೀಕ್ಷೆಗೆ ಹಾಜರಾಗಿದ್ದಾರೆ. ಮತ್ತೆ ಇಂದಿನ ಪಂದ್ಯಕ್ಕೆ ತಂಡವನ್ನು ಕೂಡಿಕೊಂಡು ನಾಳೆ ನಡೆಯಲಿರುವ ಮತ್ತೊಂದು ಪರೀಕ್ಷೆಗೆ ಪ್ರಯಾಸ್ ಕೋಲ್ಕೊತ್ತಾಕ್ಕೆ ತೆರಳಬೇಕಿದೆ. ಆತನಿಗೆ ಇದು ಕಷ್ಟವಾಗುತ್ತಿದೆ. ಹಾಗಿದ್ದರೂ ತಂಡದ ಬೆಂಬಲ ಅವನಿಗಿರುವುದರಿಂದ ನಿಭಾಯಿಸುತ್ತಿದ್ದಾನೆ ಎಂದು ಪ್ರಯಾಸ್ ತಂದೆ ಮಾಧ್ಯಮಗಳಿಗೆ ಹೇಳಿಕೊಂಡಿದ್ದಾರೆ.