ಐಪಿಎಲ್: ನಾಯಕ ಬದಲಾದ ಕೂಡಲೇ ರಾಜಸ್ಥಾನ್ ರಾಯಲ್ಸ್ ಲಕ್ ಬದಲಾಯಿತು!

ಮಂಗಳವಾರ, 23 ಏಪ್ರಿಲ್ 2019 (08:19 IST)
ಜೈಪುರ: ಮುಂಬೈ ಇಂಡಿಯನ್ಸ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 5 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.


ಆ ಮೂಲಕ ಹೊಸ ನಾಯಕನ ನೇತೃತ್ವದಲ್ಲಿ ತಂಡ ಹೊಸ ಹಾದಿ ಹಿಡಿದಿದೆ. ಅಜಿಂಕ್ಯಾ ರೆಹಾನೆಗೆ ಕೊಕ್ ಕೊಟ್ಟು ಸ್ಟೀವ್ ಸ್ಮಿತ್ ರನ್ನು ನಾಯಕನಾಗಿ ಮಾಡಿದ ಮೇಲೆ ರಾಜಸ್ಥಾನ್ ಗೆ ಇದು ಎರಡನೇ ಗೆಲುವಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 19.1 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ರಾಜಸ್ಥಾನ್ ಪರ ನಾಯಕನ ಆಟವಾಡಿದ ಸ್ಮಿತ್ 48 ಎಸೆತಗಳಲ್ಲಿ 59 ರನ್ ಸಿಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ