ಐಪಿಎಲ್: ಡೆಲ್ಲಿ ವಿರುದ್ಧ ರೋಹಿತ್ ಪಡೆ ಅಬ್ಬರ

ಶುಕ್ರವಾರ, 19 ಏಪ್ರಿಲ್ 2019 (06:04 IST)
ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 40 ರನ್ ಗಳ ಗೆಲುವು ಸಾಧಿಸಿದೆ.

 
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಪಾಂಡ್ಯ ಸಹೋದರರ ಅಬ್ಬರದಿಂದ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಕೃಣಾಲ್ ಪಾಂಡ್ಯ 37 ರನ್ ಗಳಿಸಿದರೆ ಹಾರ್ದಿಕ್ ಪಾಂಡ್ಯ 15 ಬಾಲ್ ಗಳಲ್ಲಿ 32 ರನ್ ಸಿಡಿಸಿದರು.

ಬಳಿಕ ಮೊತ್ತ ಬೆನ್ನತ್ತಿದ ಡೆಲ್ಲಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಲಷ್ಟೇ ಶಕ್ತವಾಯಿತು. ಡೆಲ್ಇ ಪರ ಶಿಖರ್ ಧವನ್ 35, ಅಕ್ಸರ್ ಪಟೇಲ್ 26 ಮತ್ತು ಪೃಥ್ವಿ ಶಾ 20 ರನ್ ಗಳಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ