ಐಪಿಎಲ್: ಆಂಡ್ರೆ ರಸೆಲ್ ಅಬ್ಬರಕ್ಕೆ ಬ್ರೇಕ್ ಹಾಕಿದ ಆರ್ ಸಿಬಿ
ಈ ಬೃಹತ್ ಮೊತ್ತವನ್ನು ಸಮರ್ಥವಾಗಿ ಬೆನ್ನಟ್ಟುತ್ತಿದರೂ ಕೆಕೆಆರ್ ಗೆ ಕೊನೆಯ ಕ್ಷಣದಲ್ಲಿ ಗೆಲುವು ಕೈ ಜಾರಿತು. ಕೆಕೆಆರ್ ಪರ ಎಂದಿನಂತೆ ಆಂಡ್ರೆ ರಸೆಲ್ ಅಬ್ಬರಿಸಿದರು. ಅವರು 25 ಬಾಲ್ ಗಳಲ್ಲಿ 65 ರನ್ ಚಚ್ಚಿದರು. ಅತ್ತ ನಿತೀಶ್ ರಾಣಾ 46 ಎಸೆತಗಳಲ್ಲಿ 85 ರನ್ ಸಿಡಿಸಿ ಆರ್ ಸಿಬಿಗೆ ತಲೆನೋವಾದರು. ಆದರೆ ಅಂತಿಮವಾಗಿ ಕೆಕೆಆರ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಲಷ್ಟೇ ಶಕ್ತವಾಯಿತು.