ಈ ಮೂಲಕ ವಿರಾಟ್ ಕೊಹ್ಲಿಗೆ ಬೇಕೆಂದೇ ಟಾಂಗ್ ಕೊಟ್ಟರೇ ಕೆಎಲ್ ರಾಹುಲ್?!

ಶನಿವಾರ, 26 ಸೆಪ್ಟಂಬರ್ 2020 (09:55 IST)
ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್ ತಮ್ಮ ಶತಕದ ಇನಿಂಗ್ಸ್‍ ಬಳಿಕ ನೀಡಿದ ಹೇಳಿಕೆಯೊಂದು ಅಭಿಮಾನಿಗಳ ಹುಬ್ಬೇರುವಂತೆ ಮಾಡಿದೆ.


ತಮ್ಮ ಭರ್ಜರಿ ಇನಿಂಗ್ಸ್ ಬಗ್ಗೆ ಮಾತನಾಡಿರುವ ಕೆಎಲ್ ನನ್ನ ಈ ಆಟಕ್ಕೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮೊನ್ನೆ ಆಡಿದ್ದ ಇನಿಂಗ್ಸ್ ಸ್ಪೂರ್ತಿ ಎಂದು ಹೊಗಳಿದ್ದರು. ಈ ಮೂಲಕ ರೋಹಿತ್ ರನ್ನು ಹೊಗಳಿ ರಾಹುಲ್ ಬೇಕೆಂದೇ ಕೊಹ್ಲಿಗೆ ಟಾಂಗ್ ಕೊಟ್ಟರೇ ಎಂದು ಇದೀಗ ಅಭಿಮಾನಿಗಳು ವ್ಯಾಖ್ಯಾನಿಸುತ್ತಿದ್ದಾರೆ. ರೋಹಿತ್ ಶರ್ಮಾ ಕೂಡಾ ರಾಹುಲ್ ಶತಕ ಸಿಡಿಸಿದ ಬೆನ್ನಲ್ಲೇ ಟ್ವಿಟರ್ ಮೂಲಕ ಅವರನ್ನು ಭರಪೂರ ಹೊಗಳಿದ್ದರು. ಇದು ಬೇಕೆಂದೇ ಕೊಹ್ಲಿಯನ್ನು ಕೆಣಕಲು ಮಾಡಿರಬಹುದೇ ಎಂಬ ಅನುಮಾನ ಕೆಲವರಿಗೆ ಮೂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ